ರಶ್ಮಿಕಾ ಮಂದಣ್ಣ ಕುರಿ ಕಾಯ್ತಿದ್ದಾರೆ ನೋಡ್ರಪ್ಪ..!!!
ಸ್ಯಾಂಡಲ್ ವುಡ್ ಗೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿಯೇ ಪಡ್ಡೆ ಹುಡುಗರ ಹೃದಯ ಕದ್ದಿದ್ದಂತೂ ಸುಳ್ಳಲ್ಲ… ಒಂದಿಷ್ಟು ಗಾಸಿಪ್ ಗಳು ಆಕೆಯ ವಿರುದ್ದ ಹರಿದಾಡುತ್ತಿದ್ದರೂ ಕೂಡ ಸಾನ್ವಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಪೋಟೋವೊಂದು ಸಖತ್ ವೈರಲ್ ಆಗುತ್ತಿದೆ.. ರಶ್ಮಿಕಾ ಚೆನ್ನೈನಲ್ಲಿ ಕುರಿ ಕಾಯುತ್ತಿರುವ ಪೋಟೋವೊಂದು ವೈರಲ್ ಆಗಿದೆ.
ರಶ್ಮಿಕಾ ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಧರಿಸಿ, ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಕುರಿಗಳನ್ನು ಕಾಯುತ್ತಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೂಡ ನೀಡಿದ್ದಾರೆ. ರಶ್ಮಿಕಾ ತಮಿಳು ಚಿತ್ರಕ್ಕಾಗಿ ಕುರಿ ಕಾಯುತ್ತಿದ್ದಾರೆ. ಈ ಮೂಲಕ ಸಿನಿಮಾದ ಪಾತ್ರಕ್ಕಾಗಿ ರಶ್ಮಿಕಾ ಸಂಪೂರ್ಣ ಬದಲಾಗಿದ್ದಾರೆ. ಈ ಫೋಟೋ ನೋಡುತ್ತಿದ್ದರೆ ಚಿತ್ರದಲ್ಲಿ ರಶ್ಮಿಕಾ ಡಿ ಗ್ಲಾಮ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕುರಿ ಕಾಯುತ್ತಿರುವ ಫೋಟೋಗಳ ಜೊತೆಗೆ ರಶ್ಮಿಕಾ ತರಕಾರಿ ಮಾರುವ ಫೋಟೋ ಕೂಡ ರಿವೀಲ್ ಆಗಿದೆ. ಅಭಿಮಾನಿಗಳಿಗೆ ತಮಿಳು ಚಿತ್ರದಲ್ಲಿ ರಶ್ಮಿಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸದ್ಯ ರಿವೀಲ್ ಆಗಿದೆ.. ರಶ್ಮಿಕಾ ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
Comments