ಇಂದು ಮೈಸೂರಿನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ನಿಶ್ಚಿತಾರ್ಥ ..!!

ಇತ್ತಿಚಿಗಷ್ಟೆ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದ ವಿಚಾರ ಸಾಕಷ್ಟು ಚರ್ಚೆಯಾಗಿತ್ತು… ಪರ ವಿರೋಧಗಳು ಎಲ್ಲೆಡೆ ಸಖತ್ ಸದ್ದು ಮಾಡಿದ್ದವು… ಆದರೂ ಕೆಲವೆಡೆ ಇವರಿಬ್ಬರ ಜೋಡಿ ನೋಡಿ ಮೇಡ್ ಫಾರ್ ಈಚ್ ಅದರ್ ಅಂದಿದ್ದು ಮಾತ್ರ ಸುಳ್ಳಲ್ಲ… ಇದೀಗ ಪರ ವಿರೋಧಗಳ ನಡುವೆಯೂ ಕೂಡ ಅವರಿಬ್ಬರ ನಿಶ್ಚಿತಾರ್ಥ ಇಂದು ನಡೆಯಲಿದೆ.
ಚಂದನ್ ಮತ್ತು ನಿವೇದಿತಾ ಗೌಡ ಎಂಗೇಜ್ ಮೆಂಟ್ ಸೋಮವಾರ ಮೈಸೂರಿನಲ್ಲಿ ನಡೆಯುವುದು ಖಚಿತವಾಗಿದೆ. ಹೌದು, ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಎಂಗೇಜ್ ಮೆಂಟ್ ನಡೆಯಲಿದ್ದು, ಕುಟುಂಬದ ಆಪ್ತರು ಮಾತ್ರ ಈ ಶುಭ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನುಗಳ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ನಿವೇದಿತಾಗೆ ವೇದಿಕೆಯಲ್ಲೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಹೇಳಿಕೊಂಡಿದ್ದರು. ಹೀಗಾಗಿ 400 ವರ್ಷಗಳ ಇತಿಹಾಸವಿರುವ ಮೈಸೂರು ದಸರಾದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನೆಟ್ಟಿಗರು ಕೂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
Comments