ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು..

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಯಕೃತ್ತು ಸಂಬಂಧಿಸಿದ ಖಾಯಿಲೆಯಿಂದ ಅಮಿತಾಭ್ ಬಚ್ಚನ್ ಬಳಲುತ್ತಿದ್ದಾರೆಂದು ವರದಿಯಾಗಿದೆ. ಕಳೆದ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಮಿತಾಭ್ ಅವರನ್ನು ನಾನವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಅಮಿತಾಭ್ ಅವರ ಲಿವರ್ ನ ಶೇ.75ರಷ್ಟು ಈಗಾಗಲೇ ಹಾನಿಯಾಗಿದೆ ಎಂದು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ತಾನು ಕೇವಲ 25% ಲಿವರ್ ನಲ್ಲೇ ಬದುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಅಮಿತಾಬ್ ಎಂಟು ವರ್ಷಗಳ ಕಾಲ ತಮಗೆ ಟಿಬಿ ಇದೆ ಎಂಬುದೇ ಗೊತ್ತಿರದ ಕಾರಣ ತಮಗೆ ಹೆಪಟೈಟಿಸ್ ಬಿ ಬಾಧಿಸಿದ್ದು ಅದರಿಂದ ಕೆಟ್ಟ ರಕ್ತ ಕಣಗಳು ಸೃಷ್ಟಿಯಾಗಿ ತಮ್ಮ ಲಿವರ್ ನ ಶೇ.75 ರಷ್ಟು ಭಾಗ ಹಾಳಾಗಿದೆ ಎಂದು ಹೇಳಿಕೊಂಡಿದ್ದರು... ಈ ವಿಚಾರ ತಮಗೆ 20 ವರ್ಷಗಳ ನಂತರ ತಿಳಿದು ಬಂದಿದೆ… ಕೇವಲ ಶೇ.25 ಮಾತ್ರ ಕೆಲಸ ಮಾಡುವ ಲಿವರ್ ಮೇಲೆ ಬದುಕಿರುವುದಾಗಿ ತಿಳಿಸಿದ್ದರು..
Comments