ಸುಧಾಮೂರ್ತಿಯವರ ಜೀವನ ಸಿನಿಮಾವಾಗಲಿದೆಯಂತೆ..!! ನಾಯಕಿ ಯಾರ್ ಗೊತ್ತಾ..?
ಕೆಲವು ಗಣ್ಯರ ಜೀವನ ಚರಿತ್ರೆಗಳು ಸಿನಿಮಾದ ರೂಪವನ್ನು ಪಡೆದಿರುವ ಉದಾಹರಣೆಗಳು ಸಾಕಷ್ಟು ಇವೆ… ಆದರೆ ಇದೀಗ ಮತ್ತೊಬ್ಬ ಗಣ್ಯರ ಜೀವನ ಚರಿತ್ರೆ ಸಿನಿಮಾವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅರೇ ಹೌದಾ ಯಾರಪ್ಪ ಅದು ಅಂತಾ ಯೋಚನೆ ಮಾಡುತ್ತಿದ್ದೀರಾ.. ಮುಂದೆ ಓದಿ
ಇನ್ ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಬಗ್ಗೆ ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ಸಿನಿಮಾ ಮಾಡುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಜೀವನಗಾಥೆ ಇರಲಿದೆ ಎನ್ನಲಾಗುತ್ತಿದೆ.. ಈ ವಿಚಾರವನ್ನು ಅಶ್ವಿನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸುಧಾಮೂರ್ತಿ ಪಾತ್ರ ಮಾಡುವವರು ಯಾರು ಎಂಬ ಪ್ರಶ್ನೆ ಮಾಡಬಹುದು ಈಗಾಗಲೇ ಈ ಪಾತ್ರಕ್ಕಾಗಿ ನಟಿ ಅಲಿಯಾ ಭಟ್ ರನ್ನು ಆಯ್ಕೆ ಮಾಡಿದ್ದಾರಂತೆ.. ಆದರೆ ಯಾವುದು ಕೂಡ ಇನ್ನೂ ಖಚಿತವಾಗಿಲ್ಲ ಎನ್ನಲಾಗುತ್ತಿದೆ. ಆಕೆ ಒಪ್ಪಿಕೊಂಡರೆ ಸುಧಾಮೂರ್ತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.
Comments