ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಬಾಸ್ ಯಾರಂತೆ ಗೊತ್ತಾ..?
ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ ಪ್ರತಿಯೊಬ್ಬರಿಗೆ ಒಬ್ಬೊಬ್ಬರು ಗಾಡ್ ಫಾದರ್ ಇದ್ದೆ ಇರ್ತಾರೆ… ಅದೇ ರೀತಿ ನಮ್ಮ ಸ್ಯಾಂಡಲ್’ವುಡ್ ನ ಸ್ಟಾರ್ ಗಳಿಗೂ ಕೂಡ ಒಬ್ಬೊಬ್ಬರು ಗಾಡ್ ಫಾದರ್ ಇರ್ತಾರೆ. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೂ ಕೂಡ ಒಬ್ಬರು ಬಾಸ್ ಇದ್ದಾರಂತೆ.. ಕಿಚ್ಚ ಸುದೀಪ್ ಯಾವಾಗಲೂ ಅಭಿಮಾನಿಗಳಿಗೆ ಹತ್ತಿರ ಆಗಲೂ ಬಯಸುತ್ತಿರುತ್ತಾರೆ.. ಅದೇ ರೀತಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಯಾವಾಗಲೂ ಟ್ವಿಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. . ಸಾಧ್ಯವಾದಷ್ಟು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ಕಿಚ್ಚನಿಗೆ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಮ್ಮ ಬಾಸ್ ನೀವು, ನಿಮ್ಮ ಬಾಸ್ ಯಾರು ಎಂದು ಸುದೀಪ್ ಗೆ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಕಿಚ್ಚ ಕೊಟ್ಟ ಉತ್ತರ ಏನ್ ಗೊತ್ತಾ..? 'ನನಗೆ ಬಾಸ್ ಇಲ್ಲ. ಆ ಸ್ಥಾನದಲ್ಲಿ ತಂದೆ ಇದ್ದಾರೆ' ಎಂದು ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ. . ಮತ್ತೊಬ್ಬ ಅಭಿಮಾನಿ ನಿಮ್ಮ ನಿಜ ಜೀವನದಲ್ಲಿ ಕುಸ್ತಿ ಆಡಿದ್ದೀರಾ ಎಂದು ಕೇಳಿದ್ದಕ್ಕೆ ರಿಯಲ್ ಲೈಫ್ ನಲ್ಲಿ ಬೇರೆ ಬೇರೆ ರೀತಿಯ ಕುಸ್ತಿ ನಡೆಯುತ್ತಲೇ ಇರುತ್ತದೆ ಎಂದು ನಿಗೂಢವಾಗಿ ಉತ್ತರಿಸಿದ್ದಾರೆ. ಚಂದನವನದ ಬಹು ನಿರೀಕ್ಷಿತ ಸಿನಿಮಾವಾದ ಪೈಲ್ವಾನ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
Comments