ಶಾರುಕ್ ಮಗಳನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!!!

ದೊಡ್ಡ ದೊಡ್ಡ ಸೆಲಬ್ರೆಟಿಗಳು ಆಗಿಂದಾಗೆ ಸುದ್ದಿಯಾಗುವುದು ಕಾಮನ್… ಆದರೆ ಸೆಲಬ್ರೆಟಿಗಳ ಜೊತೆಗೆ ಅವರ ಮಕ್ಕಳು ಕೂಡ ಸದಾ ಸದ್ದು ಮಾಡುತ್ತಾ ಸುದ್ದಿಲ್ಲಿರುತ್ತಾರೆ. ಇದೀಗ ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಸುದ್ದಿಯಲ್ಲಿದ್ದಾರೆ. ಇವರು ಸುದ್ದಿಯಾಗುವುದು ಹೊಸದೇನಲ್ಲ… ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಸೋಷಿಯಲ್ ಮಿಡೀಯಾದಲ್ಲಿ ಸುಹಾನ ಆಕ್ಟೀವ್ ಆಗಿ ಇರುತ್ತಾರೆ.
ಸುಹಾನಖಾನ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಶಾರುಖ್ ಅಭಿಮಾನಿಗಳು ಸುಹಾನಾಳನ್ನು ಸಖತ್ತಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಅವರ ಎದೆ ಭಾಗ ಕಾಣುವಂತೆ ಒಂದು ಕೈಯಲ್ಲಿ ಕಾಫಿ ಕಪ್ ಹಾಗೂ ಮತ್ತೊಂದು ಕೈಯಲ್ಲಿ ಫೈಲ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ.ಆ ಪೋಟೋಗೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಫೋಟೋವನ್ನು ನೋಡಿ ಕೆಲವರು, ಇಷ್ಟೊಂದು ಶೋ ಆಫ್ ಮಾಡಬೇಡ. ನೀನು ಸಾಧಾರಣ ಉಡುಪು ಧರಿಸಿದರೂ ಸುಂದರವಾಗಿ ಕಾಣಿಸುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿಮ್ಮ ಉಡುಪು ಸರಿ ಮಾಡಿಕೊಳ್ಳಿ. ನೀವು ಶಾರುಖ್ ಖಾನ್ ಅವರ ಮಗಳು. ನಿಮಗೆ ಈ ಶೋ ಆಫ್ ಅಗತ್ಯವಿಲ್ಲ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಲಬ್ರೆಟಿಗಳಿಗಿಂತ ಅವರ ಮಕ್ಕಳೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ.
Comments