ರಾನು ಮೊಂಡಲ್ ಹಾಡಿಗೆ ಪ್ರತಿಕ್ರಿಯೆ ನೀಡಿದ ಲತಾ ಮಂಗೇಶ್ಕರ್..!!
ಅದೃಷ್ಟ ಎಂಬುದು ಯಾರ ಸ್ವತ್ತು ಅಲ್ಲ ಎಂಬುದಕ್ಕೆ ರಾತ್ರೋ ರಾತ್ರಿ ಸ್ಟಾರ್ ಸಿಂಗರ್ ಆದ ರಾನು ಮೊಂಡಲ್ ಅವರೇ ಉತ್ತಮ ನಿದರ್ಶನ.. ರೈಲ್ವೆ ಸ್ಟೇಷನ್ ನಲ್ಲಿ ಹಾಡು ಹೇಳಿಕೊಂಡು ಭಿಕ್ಷೆ ಬೇಡುತ್ತಿದ್ದ ಈಕೆ ಈಗ ಬಹುಬೇಡಿಕೆಯ ಸಿಂಗರ್ ಗಳಲ್ಲಿ ಒಬ್ಬರಾಗಿದ್ದಾರೆ.. ಸಾಕಷ್ಟು ಜನ ಅವರ ಧ್ವನಿ ಲತಾ ಮಂಗೇಶ್ಕರ್ ಅವರ ರೀತಿಯಲ್ಲಿದೆ ಎಂದಿದ್ದರು.. ಇದೀಗ ಗಾನ ಕೋಗಿಲೆ ಲತಾ ಮಂಗೇಶ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ ಎಂದು ಹೇಳುವ ಮೂಲಕ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ರಾತ್ರೋರಾತ್ರಿ ಇಂಟರ್ ನೆಟ್ ಸ್ಟಾರ್ ಆದ ರಾನು ಮೊಂಡಲ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ ಲತಾ ಮಂಗೇಶ್ಕರ್ ಅವರು, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂಟರ್ ನೆಟ್ ಸ್ಟಾರ್ ಆದ ರಾನು ಮೊಂಡಲ್ ಅವರಿಗೆ ಇದೀಗ ಆಫರ್ ಗಳು ಅರಸಿಕೊಂಡು ಬರುತ್ತಿವೆ ಎನ್ನಬಹುದು.
Comments