ಅಪಾರ್ಟ್ಮೆಂಟ್ ನಿಂದ ಬಿದ್ದು ನಟಿ ಆತ್ಮಹತ್ಯೆ.!!
ಅಪಾರ್ಟ್’ಮೆಂಟ್ನಿಂದ ನಟಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ನಟಿಯನ್ನು ಪರ್ಲ್ ಪಂಜಾಬಿ ಎಂದು ಗುರುತಿಸಲಾಗಿದೆ. ಈಕೆ ಮಹತ್ವಾಕಾಂಕ್ಷಿ ನಟಿಯಾಗಿದ್ದು ಮಾಡೆಲ್ ಕೂಡ ಆಗಿದ್ದರು.. ಈ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲು ಪ್ರಯತ್ನ ಮಾಡುತ್ತಿದ್ದಳು.. ಆದರೆ ನಟನೆಯಲ್ಲಿ ಆಕೆ ಯಶಸ್ಸು ಕಾಣದ ಕಾರಣ ಮನನೊಂದಿದ್ದಳು.
ಈ ನಟಿ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೆಕ್ಯೂರಿಟಿ ಗಾರ್ಡ್ ಬಿಪಿನ್ ಕುಮಾರ್ ಠಾಕೂರ್, ಈ ಘಟನೆ ರಾತ್ರಿ ಸುಮಾರು 12.30 ನರಲ್ಲಿ ನಡೆದಿದೆ. ಈ ವೇಳೆ ಯಾವುದೋ ಶಬ್ಧವೊಂದು ಕೇಳಿಸಿತ್ತು. ರಸ್ತೆಯಲ್ಲಿ ಯಾರೋ ಕೂಗುತ್ತಿದ್ದಾರೆ ಎಂದು ನಾನು ಭಾವಿಸಿದೆ. ಬಳಿಕ ಏನಾಗಿದೆ ಎಂದು ಪರಿಶೀಲಿಸಲು ಅಲ್ಲಿಗೆ ಹೋದಾಗ ಅಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಅಪಾರ್ಟ್‌ಮೆಂಟ್ ನ ಮೂರನೇ ಮಹಡಿಯಲ್ಲೂ ಕೂಡ ಯಾವುದೋ ಶಬ್ಧ ಕೇಳಿಸುತ್ತಿತ್ತು ಎಂದು ತಿಳಿಸಿದ್ದಾರೆ. ಈ ಬಗ್ಗೆ ಒಶಿವಾರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Comments