ಯುವ ನಟನ ಕೆನ್ನೆಗೆ ಕೈ ಹಾಕಿದ ಅಭಿಮಾನಿ..!! ವಿಡಿಯೋ ವೈರಲ್..!!

ಸಿನಿಮಾ ಸ್ಟಾರ್ ಗಳನ್ನು ನೋಡಿಬಿಟ್ಟರೆ ಸಾಕು ನಡು ರಸ್ತೆ ಅನ್ನೋದನ್ನು ಕಾಣದೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ.. ಇತ್ತಿಚಿಗೆ ಬಾಲಿವುಡ್ ನ ಹೊಸ ಯುವ ತಾರೆಯಾಗಿ ಮಿಂಚುತ್ತಿರುವ ಕಾರ್ತಿಕ್ ಆರ್ಯನ್ ಈಗ ಮಹಿಳಾ ಅಭಿಮಾನಿಯೊಬ್ಬರಿಂದ ಕೆನ್ನೆ ಹಿಂಡಿಸಿಕೊಂಡು ಸಖತ್ ಸುದ್ದಿಯಾಗಿದ್ದಾರೆ.ಅಷ್ಟೆ ಅಲ್ಲದೆ ಆ ವಿಡಿಯೋ ಕೂಡ ವೈರಲ್ ಆಗಿದೆ.
ಕಾರ್ತಿಕ್ ಆರ್ಯನ್ ಸಾರ್ವಜನಿಕ ಸ್ಥಳದಲ್ಲಿದ್ದಾಗ ಮಹಿಳಾ ಅಭಿಮಾನಿ ಸೆಲ್ಫಿಯನ್ನು ಕೇಳಿದ್ದಾರೆ. ಆರ್ಯನ್ ಸೆಲ್ಫಿ ನೀಡಿದ್ದಾರೆ. ಇದೇ ಸಮಯದಲ್ಲಿ ಅಭಿಮಾನಿ ಕಾರ್ತಿಕ್ ಅವರ ಮುದ್ದಾದ ನಗುವಿಗೆ ಫಿದಾ ಆಗಿ ಮಗುವಿನ ರೀತಿ ಅವರ ಕೆನ್ನೆಯನ್ನು ಹಿಂಡಿದ್ದಾರೆ. ಅಷ್ಟೆ ಅಲ್ಲದೆ ನೀವು ಬಹಳ ಹ್ಯಾಂಡ್ ಸಮ್ ಎಂದು ಹೇಳುವ ಆ ಹುಡುಗಿ ನೇರವಾಗಿ ಕೆನ್ನೆಗೆ ಕೈ ಹಾಕಿದ್ದಾಳೆ. ಕಾರ್ತಿಕ್ ನಗುತ್ತಲೇ ಅಭಿನಂದನೆಯನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಾ ಸುದ್ದಿಯಾಗುತ್ತಿದೆ.
Comments