ಹುಚ್ಚ ವೆಂಕಟ್ ರನ್ನು ಎಲ್ಲಿ ಕಂಡರು ಹೊಡೆಯಬೇಡಿ : ಸ್ಯಾಂಡಲ್ವುಡ್ ನಟನ ಮನವಿ

30 Aug 2019 11:46 AM | Entertainment
459 Report

ಕೆಲ ದಿನಗಳ ಹಿಂದಷ್ಟೆ ಹುಚ್ಚ ವೆಂಕಟ್ ಚೆನ್ನೈ ನ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದ ದೃಶ್ಯವನ್ನು ರಾಂಧವ ಸಿನಿಮಾದ ನಾಯಕ ಭುವನ್ ಪೊನ್ನಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.. ಇದೀಗ ಹುಚ್ಚ ವೆಂಕಟ್ ಮಡಕೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.. ಹುಚ್ಚ ವೆಂಕಟ್ ಗುರುವಾರ ಸಂಜೆ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡು, ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು.ಈ ವೇಳೆ ದಿಲೀಪ್ ಎಂಬುವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ರನ್ನು ನೋಡಿದ್ದಾರೆ.

ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ ನನ್ನ ಯಾಕೆ ಗುರಾಯಿಸುತ್ತಿದ್ದೀಯಾ ಎಂದು ತಕರಾರು ಎತ್ತಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಕೂಡ ಹುಚ್ಚ ವೆಂಕಟ್ ಗೆ ಧಳಿಸಿದ್ದಾರೆ.  ಹುಚ್ಚ ವೆಂಕಟ್ ರನ್ನು ಎಲ್ಲಿ ಕಂಡರೂ ಹೊಡೆಯಬೇಡಿ ಎಂದು ಸ್ಯಾಂಡಲ್ ವುಡ್ ನಟ ಭುವನ್ ಪೊನ್ನಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿಕೊಂಡು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಭುವನ್ ಸಾಮಾಜಿಕ ಜಾಲತಾಣದಲ್ಲಿ ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರೂ ಹೊಡೆಯಬೇಡಿ, ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು. ನನ್ನ ಕಳಕಳಿಯ ವಿನಂತಿ ಎಂದು ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಹುಚ್ಚ ವೆಂಕಟ್ ಸ್ಥಿತಿಯನ್ನು ಕಂಡರೆ ಎಲ್ರಿಗೂ ಕೂಡ ಮನಸು ಕರಗುತ್ತದೆ.. ಅವರು ಮಾನಸಿಕವಾಗಿ ನೊಂದಿದ್ದಾರೆ ಹಾಗಾಗಿ ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದಿದ್ದಾರೆ.

Edited By

Manjula M

Reported By

Manjula M

Comments