ದರ್ಶನ್’ಗೆ ಸೃಜನ್ ಲೋಕೇಶ್ ಮಾಡಿದ ಬಿರಿಯಾನಿ ಅಂದ್ರೆ ಇಷ್ಟವಂತೆ…!
ಸ್ಯಾಂಡಲ್ ವುಡ್ನ ಬಹುಬೇಡಿಕೆಯ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ. ಕುರುಕ್ಷೇತ್ರ ಸಿನಿಮಾ ಬಿಡುಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.. ಇದೀಗ ದರ್ಶನ್ ಬಗ್ಗೆ ಸೃಜನ್ ಲೋಕೇಶ್ ವಿಚಾರವೊಂದನ್ನು ತಿಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸೃಜನ್ ಲೋಕೇಶ್ ಆತ್ಮೀಯ ಸ್ನೇಹಿತರು. ಬಿಡುವಿನ ವೇಳೆಯಲ್ಲಿ ಇಬ್ಬರು ಸ್ನೇಹಿತರೊಡಗೂಡಿ ಸಮಯ ಕಳೆಯುತ್ತಿರುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಸೃಜನ್ ಲೋಕೇಶ್, ನಾನು ಮತ್ತು ದರ್ಶನ್ ಸ್ನೇಹಿತರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಬ್ಬರು ಒಟ್ಟಿಗೆ ಸ್ನೇಹಿತರೊಂದಿಗೆ ಸೇರಿದಾಗ ಹರಟೆ ಹೊಡಿತೀವಿ. ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಇನ್ನು ಇಬ್ಬರೂ ಸ್ನೇಹಿತರೊಂದಿಗೆ ಸೇರಿದಾಗ ಒಟ್ಟಿಗೆ ಅಡುಗೆ ಮಾಡಿ ಊಟ ಮಾಡುತ್ತಾರೆ. ಆದರೆ, ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಬಹುದಿನಗಳಿಂದ ಸೇರಲು ಸಾಧ್ಯವಾಗಿಲ್ಲ. ಮೈಸೂರು ಸಮೀಪವಿರುವ ದರ್ಶನ್ ಫಾರಮ್ ಹೌಸ್ ನಲ್ಲಿ ಸ್ನೇಹಿತರು ಸೇರಿದರೆಂದರೆ ಮಿನಿ ಹಬ್ಬವೇ ನಡೆಯುತ್ತದೆ. ದರ್ಶನ್ ಅವರಿಗೆ ಸೃಜನ್ ಲೋಕೇಶ್ ತಯಾರಿಸಿದ ಬಿರಿಯಾನಿ ಮತ್ತು ಚಿಲ್ಲಿ ಚಿಕನ್ ಅಂದ್ರೆ ಬಲು ಇಷ್ಟವಂತೆ.. ಹಾಗಾಗಿ ಅವರಿಬ್ಬರು ಒಟ್ಟಿಗೆ ಸೇರಿದ್ರೆ ಹಬ್ಬವೇ ಆಗುತ್ತದೆ ಎದು ತಿಳಿಸಿದ್ದಾರೆ.
Comments