ಸ್ಟಾರ್ ನಟಿಯನ್ನು ಹೋಟೆಲ್ ರೂಮಿಗೆ ಬಾ ಎಂದ ನಿರ್ದೇಶಕ..!!!

ಬಣ್ಣದ ಜಗತ್ತಿನ ನಟಿಯರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.. ತೆರೆ ಮೇಲೆ ಅವರನ್ನು ನೋಡಿ ಅಯ್ಯೊ ಎಷ್ಟು ಮುದ್ದಾಗಿದ್ದಾರೆ ಈ ನಟಿಯರು ಎನ್ನುತ್ತೇವೆ.. ಆದರೆ ಅವರು ತೆರೆ ಹಿಂದೆ ಪಡುವ ಕಷ್ಟವನ್ನು ಯಾರು ಕಂಡಿರುವುದಿಲ್ಲ.. ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಅವಕಾಶ ಬೇಕು ಎಂದರೆ ಮಂಚಕ್ಕೆ ಕೂಡ ಕರೆದಿರುತ್ತಾರೆ.. ನಟಿ ಮಣಿಯರು ಈ ರೀತಿಯ ತೊಂದರೆಗಳನ್ನು ಸಾಕಷ್ಟು ಬಾರಿ ಹಂಚಿಕೊಂಡಿರುವುದು ಕೂಡ ಉಂಟು.
ಇದೀಗ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ನಿರ್ದೇಶಕರೊಬ್ಬರು ಹೋಟೆಲಿನ ರೂಮಿಗೆ ಬರಲು ಹೇಳಿದ್ದನು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ವಿದ್ಯಾ ಬಾಲಾನ್ 2005ರಲ್ಲಿ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ನಾನು ಚೆನ್ನೈನಲ್ಲಿ ಕೆಲಸದ ವಿಷಯಕ್ಕಾಗಿ ಒಬ್ಬ ನಿರ್ದೇಶಕರನ್ನು ಭೇಟಿ ಮಾಡಿದೆ. ಆಗ ನಾನು ಅವರಿಗೆ ಕಾಫಿ ಶಾಪ್‍ಗೆ ಹೋಗಿ ಮಾತನಾಡೋಣ ಎಂದು ಹೇಳಿದ್ದೆ. ಆದರೆ ಅವರು ಪದೇ ಪದೇ ರೂಮಿಗೆ ಹೋಗುವುದರ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೆ ನನ್ನ ಜೊತೆ ಮಾತನಾಡಬೇಕು ಎಂದರೆ ರೂಮಿಗೆ ಬರಬೇಕು ಎಂದು ಹೇಳುತ್ತಿದ್ದನು. ಅಲ್ಲದೆ, ನಾನು ನಿರ್ದೇಶಕನ ಯೋಚನೆಯನ್ನು ತಿಳಿದು ಆತನ ಜೊತೆ ರೂಮಿಗೆ ಹೋಗಿದ್ದೆ. ಆದರೆ ನಾನು ಅಲ್ಲಿ ನಾನು ಬಾಗಿಲನ್ನು ಕ್ಲೋಸ್ ಮಾಡದೇ ಓಪನ್ ಮಾಡಿದ್ದೆ. ಈ ವೇಳೆ ನಿರ್ದೇಶಕ ಏನೂ ಮಾತನಾಡಲಿಲ್ಲ. 5 ನಿಮಿಷದ ನಂತರ ಆತ ಅಲ್ಲಿಂದ ಎದ್ದು ಹೋದನು ಎಂದು ವಿದ್ಯಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ಶೋಷಣೆ ತಪ್ಪಿದಲ್ಲ.. ಹೆಣ್ಣು ಮಕ್ಕಳು ತಮ್ಮನ್ನ ತಾವು ರಕ್ಷಿಸಿಕೊಳ್ಳುವುದಕ್ಕೆ ಎಲ್ಲಾ ರೀತಿಯ ಸಾಹಸವನ್ನು ಕೆಲವೊಮ್ಮೆ ಮಾಡಬೇಕಾಗುತ್ತದೆ.. ಕೆಲ ತಿಂಗಳ ಹಿಂದೆ ಕಾಸ್ಟಿಂಗ್ ಕೌಚ್ ಬಂದರೂ ಅಷ್ಟಾಗಿ ಯಾರ ಮೇಲಿಯೂ ಕೂಡ ಪ್ರಭಾವ ಬೀರಲಿಲ್ಲ.
Comments