ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮೊಂಡಲ್ ಮೊದಲ ಹಾಡಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ…?
ಅದೃಷ್ಟ ಎನ್ನುವುದು ಯಾರ ಮನೆಯ ಸ್ವತ್ತು ಅಲ್ಲ… ಬೀದಿಯಲ್ಲಿ ಇದ್ದವರು ರಾತ್ರಿ ಕಳೆದು ಬೆಳ್ಳಗೆ ಆಗುವವಷ್ಟರಲ್ಲಿ ಅರಮನೆ ಸೇರಿ ಬಿಡುತ್ತಾರೆ. ಇದು ಅದೃಷ್ಟ ಅಂದ್ರೆ. ಕೇವಲ ಅದೃಷ್ಟ ಅಷ್ಟೆ ಅಲ್ಲ ಅದರ ಜೊತೆಗೆ ಶ್ರಮ ಕೂಡ ಇರಬೇಕು.. ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಕೆಲವರ ಸ್ಟಾರ್ ಗಳನ್ನೆ ಬದಲಾಯಿಸಿ ಬಿಡುತ್ತದೆ. ಅದಕ್ಕೆ ನಿದರ್ಶನ ಈ ರಾನು ಮೊಂಡಲ್.. ರೈಲ್ವೆ ನಿಲ್ದಾಣದಲ್ಲಿ ಹಾಡುಗಳನ್ನು ಹಾಡಿ ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮೊಂಡಲ್ ಅದೃಷ್ಟ ಇದೀಗ ಬದಲಾಗಿದೆ. ಲತಾಮಂಗೇಶ್ಕರ್ ಹಾಡು ಹಾಡಿದ್ದ ರಾನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋ ನೋಡಿದ ಪ್ರತಿಯೊಬ್ಬರು ರಾನು ಕಂಠಕ್ಕೆ ಮಾರು ಹೋಗಿದ್ದರು. ಬಾಲಿವುಡ್ ಸಹ ರಾನು ಮೊಂಡಾಲ್ ಕಂಠಕ್ಕೆ ಮಾರು ಹೋಗಿತ್ತು… ಸದ್ಯ ಹಿಮೇಶ್ ರೇಶಮಿಯಾರ ಮುಂದಿನ ಚಿತ್ರದ ಹಾಡನ್ನು ರಾನು ಹಾಡಿದ್ದಾರೆ. ತೇರಿ ಮೇರಿ ಕಹಾನಿ ಹಾಡು ರಾನು ಕಂಠದಲ್ಲಿ ಅದ್ಬುತವಾಗಿ ಕೇಳಿಸುತ್ತಿದೆ. ಹಿಮೇಶ್ ರೇಶಮಿಯಾ ಮುಂದೆ ರಾನು ಹಾಡ್ತಿರುವ ವಿಡಿಯೋ 2 ದಿನಗಳ ಹಿಂದೆ ವೈರಲ್ ಆಗಿತ್ತು. ಈಗ ರಾನು ಬಾಲಿವುಡ್ ತನ್ನ ಮೊದಲ ಹಾಡಿಗೆ ಎಷ್ಟು ಸಂಭಾವನೆ ಪಡೆದಿದ್ದಾಳೆ ಎಂಬುದು ತಿಳಿದು ಬಂದಿದೆ. ರಾನುಗೆ ಹಿಮೇಶ್ 6-7 ಲಕ್ಷ ರೂಪಾಯಿ ನೀಡಿದ್ದಾರಂತೆ. ರಾನು ಇದನ್ನು ಸ್ವೀಕರಿಸಲು ನಿರಾಕರಿಸಿದ್ದಳಂತೆ. ರೇಶಮಿಯಾ ಒತ್ತಾಯ ಮಾಡಿ ಸಂಭಾವನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ಬಾಲಿವುಡ್ ನ ಸೂಪರ್ ಸ್ಟಾರ್ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ರೇಶಮಿಯಾ ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸೋಷಿಯಲ್ ಮಿಡಿಯಾ ಎಷ್ಟರ ಮಟ್ಟಿಗೆ ಒಬ್ಬರನ್ನು ಗುರುತಿಸಿ ಬೆಳೆಸುತ್ತದೆ ಎನ್ನುವುದಕ್ಕೆ ರಾನು ಮೊಂಡಾಲ್ ಸಾಕ್ಷಿ..
Comments