ಅರುಣ್ ಜೇಟ್ಲಿ ಸಾವಿನ ಮುನ್ಸೂಚನೆ 10 ದಿನಗಳ ಮೊದಲೇ ಸಿಕ್ಕಿತ್ತಂತೆ ಈ ನಟಿಗೆ..!!
ಮೊನ್ನೆ ಮೊನ್ನೆಯಷ್ಟೆ ಕೇಂದ್ರದ ಮಾಜಿ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ನಿಧನಕ್ಕೆ ಇಡೀ ದೇಶವೆ ಕಂಬನಿ ಮಿಡಿದಿದೆ…ರಾಜಕೀಯದ ಗಣ್ಯರು, ಕಲಾವಿದರು, ಆಟಗಾರರು ಸೇರಿದಂತೆ ಸಾಕಷ್ಟು ಜನರು ಕಂಬನಿ ಮಿಡಿದಿದ್ದಾರೆ… ಆದರೆ ಬಾಲಿವುಡ್’ನ ಡ್ರಾಮ ಕ್ವೀನ್ ರಾಕಿ ಸಾವಂತ್ ಸೋಷಿಯಲ್ ಮಿಡೀಯಾದಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಆ ವಿಡಿಯೋದಿಂದಾಗಿ ರಾಖಿ ಸಾವಂತ್ ಮತ್ತೆ ಟ್ರೋಲ್ ಆಗಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ರಾಖಿ ಸಾವಂತ್ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ. ಅದರಲ್ಲಿ ಬಿಜೆಪಿ ನಾಯಕ ಅರುಣ್ ಜೇಟ್ಲಿ ಇನ್ನಿಲ್ಲ. ನನಗೆ 10 ದಿನಗಳ ಹಿಂದೆ ಈ ಬಗ್ಗೆ ಸ್ವಪ್ನ ಬಿದ್ದಿತ್ತು. ನನಗೆ ಆಗಾಗ ಇಂಥ ಸ್ವಪ್ನ ಬೀಳುತ್ತದೆ. ಗೊತ್ತಿಲ್ಲ ಯಾಕೆ ಹೀಗಾಗುತ್ತೆ ಎಂಬುದು. ಇದು ದೇವರ ಆಶೀರ್ವಾದ. ಅರುಣ್ ಜೇಟ್ಲಿ ಆತ್ಮಕ್ಕೆ ಶಾಂತಿ ಸಿಗಲಿ. ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದನ್ನು ನಾವು ನೆನಪಿಟ್ಟುಕೊಳ್ಳುತ್ತೇವೆ...ಹೀಗೆ ವಿಡಿಯೋದಲ್ಲಿ ಅನೇಕ ವಿಷ್ಯಗಳನ್ನು ರಾಖಿ ಹೇಳಿದ್ದಾಳೆ.. ರಾಖಿ ವಿಡಿಯೋ ನೋಡಿದ ಅಭಿಮಾನಿಗಳು ಕೋಪಗೊಂಡಿದ್ದಾರೆ. ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, ನೀನೂ ಸಾಯಿ ಎಂದು ಶಪಿಸಿದ್ದಾನೆ. ಮತ್ತೊಬ್ಬರು ನಿನಗೆ ಪ್ರಜ್ಞೆಯ ಕೊರತೆಯಿದೆ. ಸ್ವಪ್ನದಲ್ಲಿ ಅದನ್ನು ನೋಡು ಎಂದಿದ್ದಾರೆ. ಹೀಗೆ ರಾಖಿ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಒಟ್ಟಿನಲ್ಲಿ ರಾಕಿ ಸಾವಂತ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ ಮೊನ್ನೆ ಮೊನ್ನೆಯಷ್ಟೆ ರಾಕಿ ವಿಚ್ಚೇದನ ಪಡೆದುಕೊಂಡಿದ್ಧಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Comments