ಹೆಂಡತಿಯ ಮೇಲೆ ಹಲ್ಲೆ ಮಾಡಿದ ಮತ್ತೊಬ್ಬ ಸ್ಯಾಂಡಲ್ ವುಡ್ ನಟ..!!

ಇತ್ತಿಚಿಗೆ ಚಂದನವನದಲ್ಲಿ ಒಂದಷ್ಟು ಸುದ್ದಿಗಳು ಸಖತ್ ಸದ್ದು ಮಾಡುತ್ತಿವೆ. ಅದರಲ್ಲಿ ಸ್ಯಾಂಡಲ್ವುಡ್ ನಟನಟಿಯರ ವಿಚಾರ ಒಂದಷ್ಟು ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಹಿರಿಯ ಪತ್ರಕರ್ತರಾದ ರವಿ ಬೆಳಗರೆಯವರು ಇತ್ತಿಚಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.. ದರ್ಶನ್ ತನ್ನ ಹೆಂಡತಿಗೆ ಹೊಡೆಯುತ್ತಾರೆ, ದುನಿಯಾ ವಿಜಯ್ ಗೆ ಇಬ್ಬರು ಹೆಂಡತಿಯರು ಎಂದು ಆ ವಿಡಿಯೋದಲ್ಲಿ ರವಿ ಬೆಳಗೆರೆ ತಿಳಿಸಿದ್ದರು,.. ದುನಿಯಾ ವಿಜಿ ಆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರ ಪ್ಯಾಮಿಲಿ ವಿಚಾರ ನೋಡಿಕೊಂಡರೆ ಸಾಕು, ನಮ್ಮ ವಿಚಾರಕ್ಕೆ ಬರುವ ಅಗತ್ಯವಿಲ್ಲ ಎಂದು ಗರಂ ಆಗಿಯೇ ವಾರ್ನಿಂಗ್ ಮಾಡಿದ್ದರು.
ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಹೆಂಡತಿಗೆ ಹೊಡೆದು ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಟ ತನ್ನ ಪತ್ನಿ ಹಾಗೂ ಮಗುವನ್ನು ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಹುಲಿರಾಯ, ಕಪಟನಾಟಕ, ಕಡ್ಡಿಪುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲು ನಾಗೇಂದ್ರ, ಪತ್ನಿ ತವರು ಮನೆಗೆ ಹಣ ಕಳಿಸುತ್ತಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ. ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ, ಪ್ರತೀ ತಿಂಗಳು 8 ಸಾವಿರ ರೂ. ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಕೋಪಗೊಂಡ ನಟ, ನನಗೆ ದಿನ ಹೊಡೆಯುತ್ತಿದ್ದರು. ಅಲ್ಲದೇ ಪ್ರತೀ ದಿನ ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸುತ್ತಿದ್ದರು ಎಂದು ಬಾಲು ಪತ್ನಿ ಆರೋಪ ಮಾಡಿದ್ದಾರೆ. ಹೆಂಡತಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ನಟನನ್ನು ಈಗಾಗಲೇ ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ.
Comments