ಮದುವೆಯಾಗಿ ಒಂದು ತಿಂಗಳಲ್ಲೇ ಮುರಿದು ಬಿತ್ತಾ ಈ ನಟಿಯ ಮದುವೆ..!?

ಸದ್ಯ ಬಾಲಿವುಡ್ ನಲ್ಲಿ ಡ್ರಾಮ ಕ್ವೀನ್ ಅಂತಾನೇ ಫೇಮಸ್ ಆಗಿರುವ ರಾಕಿ ಸಾವಂತ್ ಮದುವೆಯ ವಿಚಾರಕ್ಕೆ ಸದಾ ಸುದ್ದಿಯಲ್ಲಿಯೇ ಇರುತ್ತಾರೆ.. ಈ ಬಾಲಿವುಡ್ ಡ್ರಾಮ ಕ್ವೀನ್ ರಾಖಿ ಸಾವಂತ್ ಜುಲೈ 28 ರಂದು ಮದುವೆಯಾಗಿರುವುದಾಗಿ ತಿಳಿಸಿದ್ದರು.. ಆದರೆ ಇದುವರೆಗೂ ಕೂಡ ತನ್ನ ಪತಿಯ ಪೋಟೋವನ್ನು ಎಲ್ಲಿಯೂ ಕೂಡ ಹಂಚಿಕೊಂಡಿಲ್ಲ.. ಕೆಲ ದಿನಗಳ ಹಿಂದೆ ಹನಿಮೂನ್ ಪೋಟೊವನ್ನು ಹಂಚಿಕೊಂಡು ನಾನು ಖುಷಿಯಾಗಿದ್ದೇನೆ ಎಂದು ತಿಳಿಸಿದ್ದರು..
ಆದರೆ ಇದೀಗ ರಾಖಿ ಸಾವಂತ್ ಹಂಚಿಕೊಂಡಿರುವ ಫೋಟೋ ಒಂದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.. ರಾಖಿ ತನ್ನ ಫೋಟೋ ಹಾಕಿಲ್ಲ. ಬದಲಾಗಿ ಅಳುತ್ತಿರುವ ಹುಡುಗಿ ಸ್ಟಿಕ್ಕರ್ ಮತ್ತು ಹೃದಯದ ಚಿತ್ರ ಹಾಕಿದ್ದಾಳೆ. ಈ ಫೋಟೋ ನೋಡಿದ ಅಭಿಮಾನಿಗಳು ನಾನಾ ಪ್ರಶ್ನೆಯನ್ನು ಕೇಳಲು ಪ್ರಾರಂಭ ಮಾಡಿಬಿಟ್ಟಿದ್ದಾರೆ. ಮದುವೆಯಾಗಿ ಇನ್ನೂ ಒಂದು ತಿಂಗಳಾಗಿಲ್ಲ, ಆಗ್ಲೆ ಮದುವೆ ಮುರಿದು ಬಿತ್ತಾ ಎಂದು ಒಬ್ಬ ಪ್ರಶ್ನೆ ಮಾಡಿದ್ದಾನೆ. ಇನ್ನೊಬ್ಬ ತಲಾಕ್ ಎಂದು ಪ್ರಶ್ನೆ ಮಾಡಿದ್ರೆ ಮತ್ತೊಬ್ಬ ಇನ್ನಾದ್ರೂ ಗಂಭೀರವಾಗಿರು. ನಿನ್ನ ವರ್ತನೆ ನಿನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದಾರೆ. ಒಟ್ಟಾರೆಯಾಗಿ ರಾಕಿ ಸಾವಂತ್ ಒಂದಲ್ಲ ಒಂದು ವಿಷಯಕ್ಕೆ ಪದೇ ಪದೇ ಸುದ್ದಿಯಾಗುತ್ತಿರುತ್ತಾರೆ.
Comments