ಸುದೀಪಣ್ಣ ಒಮ್ಮೆ ಬಂದು ನನ್ನ ನೋಡಿ..!!! ಅಭಿಮಾನಿಯ ಕೊನೆ ಆಸೆ..!!

ಸ್ಯಾಂಡಲ್ ವುಡ್ ನ ನಟ ನಟಿಯರಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ಅಭಿಮಾನಿಗಳು ಕೂಡ ಇದ್ದಾರೆ.. ಅಭಿಮಾನಿಗಳಿಗೆ ನಾನು ಇಷ್ಟ ಪಡುವ ನಟ ನಟಿಯನ್ನು ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿರುತ್ತದೆ. ಅದೇ ರೀತಿ ಸುದೀಪ್ ಅಭಿಮಾನಿಯೊಬ್ಬ ಸುದೀಪ್ ಅವರನ್ನು ನೋಡಿದ ಮೇಲೆಯೇ ನಾನು ಸಾಯೋದು ಅಂತಿದ್ದಾನೆ.. ಚಾಮರಾಜನಗರದಲ್ಲೊಬ್ಬ ಸುದೀಪ್ ಅಭಿಮಾನಿ ತನ್ನ ನೆಚ್ಚಿನ ನಟನನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾನೆ.
ಈ ಅಭಿಮಾನಿಯ ಹೆಸರು ಸಿದ್ದರಾಜು. ಚಾಮರಾಜನಗರದ ನಂಜದೇವನಪುರ ಗ್ರಾಮದ ನಿವಾಸಿ. ಕಳೆದ ಒಂದು ವರ್ಷದಿಂದ ಕೈ, ಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದು, ಈತ ಸರ್ವಿಕಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆಂದು ತಿಳಿದು ಬಂದಿದೆ.. ತಂದೆಗೆ ಸಹಾಯ ಮಾಡಬೇಕಾದ ಸಮಯದಲ್ಲಿ ಮಗ ಹಾಸಿಗೆ ಹಿಡಿದಿದ್ದಕ್ಕೆ ತಂದೆ-ತಾಯಿ ಕಂಗಾಲಾಗಿದ್ದಾರೆ. ಸಿದ್ದರಾಜು ತಂದೆ ಹುಟ್ಟು ಕುರುಡರಾಗಿದ್ದಾರೆ., ಮಗನ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಮಗನನ್ನು ಉಳಿಸಿಕೊಳ್ಳಲು ಅಂಧ ತಂದೆ ಭಿಕ್ಷೆ ಬೇಡಿ ತಂದು ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದು, ಭಿಕ್ಷೆ ಬೇಡಿದರಷ್ಟೇ ಆ ದಿನದ ಊಟ, ಇಲ್ಲದಿದ್ದರೆ ಆ ದಿನ ಉಪವಾಸವಿರೋ ಪರಿಸ್ಥಿತಿ ಇದೆ.. ಸಾವಿನ ಅಂತಿಮ ಕ್ಷಣಗಳನ್ನು ಎದುರಿಸುತ್ತಿರುವ ಸಿದ್ದರಾಜು, ಸಾಯುವುದಕ್ಕೂ ಮೊದಲು ಒಂದು ಬಾರಿ ಸುದೀಪ್ ನೋಡುವ ಆಸೆಯನ್ನು ತಿಳಿಸಿದ್ದಾರೆ.. ಸುದೀಪಣ್ಣ ಒಮ್ಮೆ ಬಂದು ನನ್ನ ನೋಡಿ. ನಿಮ್ಮ ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆ ಉಸಿರು ಹೋಗಲಿ ಎನ್ನುವ ಹಂಬಲ ಎಂದು ಸುದೀಪ್‌ರನ್ನ ನೋಡಲು ಸಿದ್ದರಾಜು ಹಾತೊರೆಯುತ್ತಿದ್ದಾರೆ. ನಿಜ ಹೇಳಬೇಕು ಅಂದರೆ ಚಂದನವನದ ನಮ್ಮ ನಟ ನಟಿಯರು ಇಂತಹ ಅಭಿಮಾನಿಗಳನ್ನು ಪಡೆಯಲು ಪುಣ್ಯ ಮಾಡಿದ್ದರು..
Comments