ಅನುಷ್ಕಾ ಶರ್ಮಾ ಮಾತನಾಡಿರುವ ಕನ್ನಡ ಮಾತಿಗೆ ಮನಸೋತ ನೆಟ್ಟಿಗರು..!!

ಕರುನಾಡು, ಕನ್ನಡ ನಾಡು, ಕನ್ನಡ ಪದಗಳನ್ನೆ ಕೇಳುವುದೇ ಚಂದ ಎನ್ನುವುದು ಕನ್ನಡಿಗರಿಗೆ ಗೊತ್ತಿರುವ ವಿಷಯವೇ.. ಆದರೆ ಕೆಲವರು ಕನ್ನಡ ಬಂದರೂ ಕನ್ನಡದಲ್ಲಿ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡ್ತಾರೆ..ಅದರಲ್ಲೂ ಈ ಸಿನಿಮಾ ರಂಗದಲ್ಲಿ ಇದೆಲ್ಲಾ ಹೆಚ್ಚಾಗಿಯೇ ನಡೆಯುತ್ತಿರುತ್ತದೆ.ಇತ್ತಿಚಿಗೆ ರಶ್ಮಿಕಾ ಮಂದಣ್ಣ ಕೂಡ ನನಗೆ ಕನ್ನಡ ಕಷ್ಟ ಎಂದು ಹೇಳಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು.. ಆದರೆ ಪರಭಾಷೆಯ ನಟಿ ಕನ್ನಡ ಮಾತಾಡಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಎಸ್.. ಇದೀಗ ಬಾಲಿವುಡ್ ನಟಿಯೊಬ್ಬರು ಕನ್ನಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ..ಹೌದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕನ್ನಡದಲ್ಲಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ ಕನ್ನಡದಲ್ಲಿ ಮಾತಾಡೋದಾ ಅಂತ ಯೋಚನೆ ಮಾಡಬೇಡಿ.. ಅನುಷ್ಕಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಅನುಷ್ಕಾ ಬರೀ ನಟಿಯಾಗಿದ್ದರೆ ಅವರು ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಅವರು ಸಾಮಾಜಿಕ ಕಾರ್ಯಗಳಿಂದಲೂ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಜನರು ಮಾಡಿರುವ ಪಾಸಿಟೀವ್ ಕಮೆಂಟ್ ಗಳನ್ನೆಲ್ಲಾ ಸೇರಿಸಿ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಕಮೆಂಟ್ ಗಳನ್ನು ಓದುತ್ತಾ ಕೊನೆಗೆ ‘ಅಷ್ಟೇ’ ಎನ್ನುತ್ತಾರೆ. ಅನುಷ್ಕಾ ಕನ್ನಡ ಪದ ಬಳಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ತಾಯಿಗೆ ಕನ್ನಡದಲ್ಲಿ ಶುಭಾಷಯ ತಿಳಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.. ಇದೀಗ ಅನುಷ್ಕಾ ಶರ್ಮಾ ಕನ್ನಡದ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
Comments