ಅಬ್ಬಾ..!! ಈ ನಟನ ಸಂಭಾವನೆ ಬರೋಬ್ಬರಿ 650 ಕೋಟಿಯಂತೆ..!!

ನಟ ನಟಿಯರ ಸಂಭಾವನೆ ಕೇಳುದ್ರೆ ಅಯ್ಯೋ ಇಷ್ಟೊಂದು ತಗೊತ್ತಾರ.. ನಾವು ಹೀರೋ ನೋ ಹಿರೋಯಿನ್ ಆದ್ರೆ ಹೇಗಿರುತ್ತೆ ಅಂತ ಯೋಚನೆ ಮಾಡೋದು ಕಾಮನ್.. ಆದರೆ ಇಲ್ಲೊಬ್ಬ ನಟ ನ ಸಂಭಾವನೆ ಕೇಳುದ್ರೆ ಒಮ್ಮೆ ತಲೆ ತಿರುಗುತ್ತೆ ಗೊತ್ತಾ.? ಈ ನಟನ ಸಂಭಾವನೆಯನ್ನು ನೀವು ಊಹೆ ಕೂಡ ಮಾಡುವುದಕ್ಕೂ ಸಾಧ್ಯವಿಲ್ಲ.. ವಿಶ್ವವಿಖ್ಯಾತ ನಟನಾಗಿರುವ ಮಾಜಿ ಕುಸ್ತಿಪಟು ಡ್ವೈನ್ ಜಾನ್ಸನ್ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ..
ಒಂದು ಸಿನಿಮಾಕ್ಕೆ 640 ಕೋಟಿ ರೂ. ಸಂಭಾವನೆ ಪಡೆಯುವ ಹಾಲಿವುಡ್‍ನ ನಟ ಎಂಬ ಹೆಗ್ಗಳಿಕೆಗೆ ಎರಡನೇ ವರ್ಷವೂ ಕೂಡ ಮಾಜಿ ಕುಸ್ತಿಪಟು ಡ್ವೈನ್ ಜಾನ್ಸನ್ ಪಾತ್ರರಾಗಿದ್ದಾರೆ. ಗಳಿಕೆಯಲ್ಲಿ ಹಾಲಿವುಡ್ ಸೂಪರ್‍ಸ್ಟಾರ್‍ಗಳನ್ನು ಹಿಂದಿಕ್ಕಿರುವ ಜಾನ್ಸನ್, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.. ಕಳೆದ 12 ತಿಂಗಳಿನಲ್ಲಿ ದಿ ರಾಕ್ ಖ್ಯಾತಿ ನಟ 89.3 ದಶಲಕ್ಷ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಫೋಬ್ರ್ಸ್ ನಿಯತಕಾಲಿಕ ಪ್ರಕಟಿಸಿರುವ ಪಟ್ಟಿಯು ದೃಢಪಡಿಸಿದೆ. ಅಜಾನುಬಾಹು ಡ್ವೈನ್ ಈ ಹಿಂದೆ ಕುಸ್ತಿಪಟುವಾಗಿದ್ದಾಗ ಹೆವಿ ವೇಯ್ಟ್ ಎದುರಾಳಿಗಳನ್ನು ಬಗ್ಗುಬಡಿದು ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ಸಿನಿಮಾ ರಂಗಕ್ಕೂ ಪ್ರವೇಶಿಸಿ ಅಲ್ಲಿಯೂ ಸೂಪರ್‍ಸ್ಟಾರ್‍ಗಳನ್ನು ಹಿಂದಿಕ್ಕಿ ಅದ್ಭುತ ನಟ ಎನಿಸಿದ್ದಾರೆ..ಒಟ್ಟಿನಲ್ಲಿ 640 ಕೋಟಿ ಸಂಪಾದನೆಯನ್ನು ಮಾಡುವ ಈ ನಟ ನಿಜಕ್ಕೂ ಗ್ರೇಟ್…
Comments