ಈ ಸ್ಟಾರ್ ಜೋಡಿಯ ಮದುವೆ ಮುರಿದು ಬಿತ್ತಾ..?

ಸೆಲಬ್ರೆಟಿಗಳ ನಡುವೆ ಈ ಲವ್, ಬ್ರೇಕಪ್, ಪ್ಯಾಚಪ್, ಡೇಟಿಂಗ್ ಎಲ್ಲವು ಕೂಡ ಕಾಮನ್… ಅಷ್ಟೆ ಅಲ್ಲದೆ ಸೆಲಬ್ರೆಟಿಗಳು ಎಂಗೆಜ್ಮೆಂಟ್ ಮಾಡಿಕೊಂಡು ಬ್ರೇಕಪ್ ಮಾಡಿಕೊಳ್ಳುವುದು ಇತ್ತಿಚಿಗೆ ಹೆಚ್ಚಾಗಿ ಬಿಟ್ಟಿದೆ.. ಚಂದನವನದಲ್ಲಿಯೂ ಕೂಡ ರಶ್ಮಿಕಾ ಹಾಗೂ ರಕ್ಷಿತಾ ಜೋಡಿ ಕೂಡ ಬ್ರೇಕಪ್ ಮಾಡಿಕೊಂಡರು.. ಈ ವಿಷಯ ಹೆಚ್ಚು ಚರ್ಚೆಯಾಯಿತು,, ರಶ್ಮಿಕಾ ಅಭಿಮಾನಿಗಳು ಈ ವಿಚಾರಕ್ಕೆ ರಶ್ಮಿಕಾ ಮೇಲೆ ಗರಂ ಆದರು.
ಇದೀಗ ತಮಿಳು ನಟ ವಿಶಾಲ್ ಬಗ್ಗೆಯೂ ಕೂಡ ಇದೇ ರೀತಿಯ ಸುದ್ದಿ ಹರಿದಾಡುತ್ತಿದೆ. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು. 2019 ಮಾರ್ಚ್ ನಲ್ಲಿ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥವೂ ಆಗಿತ್ತು. ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಆದರೆ ಇದೀಗ ಅವರಿಬ್ಬರ ನಡುವೆ ಯಾವುದು ಅರಿ ಇಲ್ಲ ಎನ್ನಲಾಗುತ್ತಿದೆ.. .ವಿಶಾಲ್ ಜೊತೆ ಲವ್ವಲ್ಲಿ ಇರುವುದಾಗಿ ನಟಿ ಅನಿಶಾ ಮೊದಲು ಬಹಿರಂಗಪಡಿಸಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಒಟ್ಟಿಗಿರುವ ಫೋಟೋ ಹಂಚಿಕೊಂಡು ಮದುವೆ ವಿಷ್ಯ ಬಿಚ್ಚಿಟ್ಟಿದ್ದರು. ಈಗ, ಅನಿಶಾ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಇದನ್ನ ಗಮನಿಸಿದ ನೆಟ್ಟಿಗರು ಬಹುಶಃ ಮದುವೆ ಮುರಿದು ಬಿದ್ದಿರಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿ ತಿಳಿಸಿದ್ದರು.. ಆದರೆ ಬ್ರೇಕಪ್ ಆಗಿರಬಹುದು ಎಂಬ ಸುದ್ದಿ ಹರಿದಾಡುತ್ತಿದೆ.. ಸದ್ಯ ಆ ವಿಷಯಕ್ಕೆ ಆ ಜೋಡಿಯೇ ಸ್ಪಷ್ಟನೆ ಕೊಡಬೇಕಿದೆ.
Comments