ಅಪಘಾತವಾಗ್ತಿದ್ದಂತೆ ಕಾರು ಬಿಟ್ಟು ಅಲ್ಲಿಂದ ಓಡಿ ಹೋದ ಯುವ ನಟ..!!

21 Aug 2019 5:52 PM | Entertainment
557 Report

ನಟರು ಆಗಿಂದಾಗೆ ಸುದ್ದಿಯಾಗುತ್ತಲೇ ಇರುತ್ತಾರೆ… ಕೆಲವೊಮ್ಮೆ ಒಳ್ಳೆಯದಕ್ಕೆ ಸುದ್ದಿಯಾಗುತ್ತಾರೆ. ಮತ್ತೆ ಕೆಲವೊಮ್ಮೆ ಬೇರೆ ಬೇರೆ ಸುದ್ದಿಗಳಿಗೆ ಸುದ್ದಿಯಾಗುತ್ತಾರೆ.. ಇದೀಗ ಯುವ ನಟನೊಬ್ಬ ತನ್ನ ಕಾರು ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಮಾಡಿದೆ.  ಟಾಲಿವುಡ್ ಯುವ ನಟ ರಾಜ್ ತರುಣ್ ಅವರ ಕಾರು ಆಗಸ್ಟ್ 20 ರಂದು ಅಪಘಾತಕ್ಕೆ ಒಳಗಾಗಿದೆ..

ಟಾಲಿವುಡ್  ಯುವ ನಟ ತರುಣ್ ರಾಜ್ ಅವರ ಕಾರು ಹೈದರಾಬಾದ್‍ನ ಅಲ್ಕಾಪುರ ಟೌನ್ ಶಿಪ್ ಬಳಿ ಡಿವೈಡರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ನಟನಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಆದರೆ ಅಪಘಾತ ವೇಳೆಯ ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ನಟ ತರುಣ್ ಕಾರನ್ನು ಬಿಟ್ಟು ಓಡಿ ಹೋಗುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ನೋಡುಗರಿಗೆ ಹಲವು ಅನುಮಾನ ಮೂಡಲು ಕಾರಣವಾಗಿತ್ತು. ಅಪಘಾತ ನಡೆದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸಿದ್ದ ಪರಿಣಾಮ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಭಾರೀ ಶಬ್ದ ಬಂದ ಹಿನ್ನೆಲೆಯಲ್ಲಿ ನಾನು ಕೊಂಚ ವಿಚಲಿತನಾಗಿದ್ದೆ. ಅಲ್ಲಿಂದ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೇನೆ. ಶೀಘ್ರವೇ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತೇನೆ ಎಂದು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಸದ್ಯ ಅಪಘಾತದ ಸಂದರ್ಭದಲ್ಲಿ ಯಾರಿಗೂ ಕೂಡ ಯಾವುದೇ ಅಪಾಯವಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ,

Edited By

Manjula M

Reported By

Manjula M

Comments