ಬಹಿರಂಗವಾಗಿ ಭುವನ್ ಬಳಿ ಕ್ಷಮೆ ಕೇಳಿದ ಒಳ್ಳೆ ಹುಡುಗ ಪ್ರಥಮ್..!!
ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ಬಿಗ್ ಬಾಸ್ ಮನೆಯಲ್ಲಿ ನಗು, ಅಳು, ಕಚ್ಚಾಟ ದೊಡೆದಾಟ ಎಲ್ಲವು ಇದೆ… ಅದೇ ರೀತಿ ಬಿಗ್ ಬಾಸ್ ನ ಸ್ಪರ್ಧಿಗಳಾದ ರಿಯಾಲಿಟಿ ಶೋ ನಲ್ಲಿ ಗಲಾಟೆ ಮಾಡಿಕೊಂಡಿದ್ದವರು ಆಗಿಂದಾಗೆ ಸುದ್ದಿಯಾಗುತ್ತಲೆ ಇರುತ್ತಾರೆ.. 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಗಲಾಟೆ ಮಾಡಿಕೊಂಡಿದ್ದ ನಟರಾದ ಭುವನ್ ಮತ್ತು ಪ್ರಥಮ್ ರಾಜಿಯಾಗಿದ್ದಾರೆ. ಪ್ರಥಮ್ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಕೇಸ್ ವಾಪಸ್ ಪಡೆಯಲು ಭುವನ್ ನಿರ್ಧರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದ ಪ್ರಥಮ್ ಯಾರಿಗ್ ತಾನೆ ಗೊತ್ತಿಲ್ಲ.. ಒಳ್ಳೆ ಹುಡುಗ ಪ್ರಥಮ್ ಅಂತಾನೆ ಫೇಮಸ್ ಆಗಿಬಿಟ್ಟಿದ್ದರು… ಭುವನ್ ಮತ್ತು ಪ್ರಥಮ್ ಅವರ ನಡುವೆ 'ಬಿಗ್ ಬಾಸ್' ಮನೆಯಲ್ಲಿ ಗಲಾಟೆ ನಡೆದಿತ್ತು. ನಂತರದಲ್ಲಿ 'ಬಿಗ್ ಬಾಸ್' ಮನೆಯಿಂದ ಹೊರಬಂದ ನಂತರವೂ ಮುಂದುವರೆದಿತ್ತು. ಗಲಾಟೆಯ ವೇಳೆ ಭುವನ್ ತೊಡೆಗೆ ಪ್ರಥಮ್ ಕಚ್ಚಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನಂತರ ಇಬ್ಬರ ನಡುವೆ ಸಂಧಾನಕ್ಕೆ ಅನೇಕರು ಪ್ರಯತ್ನ ನಡೆಸಿದ್ದಾರೆ. ತದ ನಂತರ ಹಿರಿಯರ ಮಾತಿಗೆ ಬೆಲೆಕೊಟ್ಟು ಇಬ್ಬರು ರಾಜಿಯಾಗಲು ನಿರ್ಧಾರ ಮಾಡಿದ್ದಾರೆ.. ಅದರಂತೆಯೇ ಪ್ರಥಮ್ ಬಹಿರಂಗವಾಗಿ ಭುವನ್ ಬಳಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯಲು ಭುವನ್ ನಿರ್ಧರಿಸಿದ್ದಾರೆ. ಎರಡೂವರೆ ವರ್ಷಗಳ ಕಾಲ ನಡೆದ ಗಲಾಟೆ, ಜಟಾಪಟಿ ಸದ್ಯ ಸುಖಾಂತ್ಯ ಕಂಡಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಕಾಮನ್.. ಈ ಸೀಜನ್ ನಲ್ಲಿಯೂ ಕೂಡ ಜಗಳಗಳು ಅತಿರೇಕಕ್ಕೆ ಎಲ್ಲರಿಗೂ ಕೂಡ ತಿಳಿದೆ ಇದೆ.
Comments