ನಿತ್ಯಾ ಮೆನನ್ ಖಡಕ್ ಉತ್ತರ ಕೊಟ್ಟಿದ್ದು ಯಾರಿಗೆ..?
ಸ್ಯಾಂಡಲ್ ವುಡ್ನಲ್ಲಿ ಮಾಡಿದ್ದು ಕೆಲವೇ ಸಿನಿಮಾಗಳಾದರೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಬೆಡಗಿ ಮೈನಾ ಖ್ಯಾತಿಯ ನಿತ್ಯಾ ಮೆನನ್.. ಕಿಚ್ಚ ಸುದೀಪ್ ಜೊತೆ ಕೂಡ ಕೋಟಿಗೊಬ್ಬ 2 ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು… ಕೋಟಿಗೊಬ್ಬ-2 ಬೆಡಗಿ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದರು. ಈಗ ನಿತ್ಯಾ ಈ ಟ್ರೋಲ್ ಮಾಡೋರಿಗೆಲ್ಲಾ ಖಡಕ್ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ನಿತ್ಯಾ ಮೆನನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರನ್ನು ಟ್ರೋಲ್‍ಗಳ ಬಗ್ಗೆ ಪ್ರಶ್ನೆ ಮಾಡಲಾಯಿತು.. . ಆಗ ಅವರು, ಜನರು ಅಜ್ಞಾನಿಗಳು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ತೂಕದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಸೋಮಾರಿ ಆಗಿದ್ದೀರಿ ಮತ್ತು ತುಂಬಾ ತಿನ್ನುತ್ತೀರಿ ಎಂದುಕೊಳ್ಳುತ್ತಾರೆ. ಇದು ಅಜ್ಞಾನ. ಸೋಮಾರಿ ಆಗುವುದರಿಂದ ಅಥವಾ ತಿನ್ನುವುದರಿಂದ ಯಾರು ತೂಕ ಹೆಚ್ಚಿಸಿಕೊಳ್ಳುವುದಿಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಾಗಿರುವುದಿಲ್ಲ ನನ್ನನ್ನು ನಂಬಿರಿ ಎಂದು ತಿಳಿಸಿದ್ದಾರೆ. ಟ್ರೋಲ್ ಮಾಡುವವರು ಹೇಗಿದ್ದರು ಟ್ರೋಲ್ ಮಾಡುತ್ತಾರೆ ದಪ್ಪ ಇದ್ದರೂ ಕೂಡ ಟ್ರೋಲ್ ಮಾಡುತ್ತಾರೆ, ಸಣ್ಣ ಇದ್ದರೂ ಕೂಡ ಟ್ರೋಲ್ ಮಾಡುತ್ತಾರೆ.ಅಂತವರಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.. ನಾನು ನನ್ನ ಸಿನಿಮಾದ ಕಡೆ ಗಮನ ಕೊಡುತ್ತೇನೆ ಎಂದಿದ್ದಾರೆ, ಅಷ್ಟೆ ಅಲ್ಲದೆ ದೇಹದ ಹಾರ್ಮೋನ್ ಸಮಸ್ಯೆಯಿಂದ ತೂಕದಲ್ಲಿ ಇಳಿಕೆ ಏರಿಕೆ ಆಗುತ್ತದೆ ಎಂದಿದ್ದಾರೆ. ನಿತ್ಯಾ ಮೆನನ್ ಈಗಾಗಲೇ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಅವರು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ‘ಮಿಷನ್ ಮಂಗಲ್’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಪರಭಾಷೆಗಳಲ್ಲಿ ಮಿಂಚುತ್ತಿರುವ ನಿತ್ಯಾರವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿರುವುದಂತೂ ಸುಳ್ಳಲ್ಲ..
Comments