ರಶ್ಮಿಕಾ ಮಂದಣ್ಣ ಮೇಲೆ ತಮಿಳು ಚಿತ್ರರಂಗ ಗರಂ..!!
ಚಂದನವನದ ಸಾನ್ವಿ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅದ್ಯಾಕೋ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಖತ್ ಸದ್ದು ಮಾಡಿದ್ದ ಈ ಚೆಲುವೆ ಪರಭಾಷೆಗಳಲ್ಲಿಯೂ ಕೂಡ ಮಿಂಚಿ ಸೈ ಎನಿಸಿಕೊಂಡರು.. ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರಕ್ಕೆ ಅಭಿಮಾನಿಗಳು ರಶ್ಮಿಕಾ ವಿರುದ್ದ ಗರಂ ಆದರು… ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಂತರ ಈಗ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈಗ ಅವರ ವಿರುದ್ಧ ತಮಿಳು ಚಿತ್ರರಂಗ ಗರಂ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರು ನಟ ಕಾರ್ತಿ ಅವರ ಜೊತೆ ತಮ್ಮ ಮೊದಲ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ… ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಹೀಗಾಗಿ ತಮಿಳು ಚಿತ್ರರಂಗ ಅವರ ವಿರುದ್ಧ ಗರಂ ಆಗಿದೆ ಎಂಬ ವಿಷಯ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ನೋಡಿದ ನಂತರ ತಮಿಳುನಾಡಿನ ಜನತೆ ರಶ್ಮಿಕಾ ಅವರನ್ನು ಕಾಲಿವುಡ್‍ಗೆ ಸ್ವಾಗತಿಸಿ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ರಶ್ಮಿಕಾ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು, ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ಅಧಿಕೃತವಾಗಿ ಟೈಟಲ್ ಪ್ರಕಟಿಸಲು ನಿರ್ಧರಿಸಿತ್ತು ಎನ್ನಲಾಗಿದೆ. ಹೀಗಾಗಿ ಸುಲ್ಯಾನ್ ಚಿತ್ರತಂಡ ರಶ್ಮಿಕಾ ಮೇಲೆ ಬೇಸರ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಅಷ್ಟೆ ಅಲ್ಲದೆ ರಶ್ಮಿಕಾ ತಮ್ಮ ತಪ್ಪಿಗೆ ಕ್ಷಮೆಯನ್ನು ಕೂಡ ಕೇಳಿದ್ದಾರೆ
Comments