ನನಗೆ ಆರೋಗ್ಯ ಸಮಸ್ಯೆ ಇದೆ ಎಂಬ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬಿಗ್ ಬಿ..!!

ಬಾಲಿವುಡ್ ನ ಬಿಗ್ ಬಿ ಅಂತಾನೇ ಫೇಮಸ್ ಆಗಿರುವ ಅಮಿತಾಭ್ ಬಚ್ಚನ್ ಶಾಕಿಂಗ್ ಸುದ್ದಿಯೊಂದನ್ನು ಹೇಳಿಕೊಂಡಿದ್ದಾರೆ.. ಯಾವುದರ ಬಗ್ಗೆ ಅಂತ ಯೋಚನೆ ಮಾಡುತ್ತಿದ್ದೀರಾ… ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ತಾವು ಖಾಯಿಲೆಯಿಂದ ಬಚಾವಾದ ವಿಷಯವನ್ನು ಹೇಳಿಕೊಂಡಿದ್ದಾರೆ.. ಹೌದು ತಮ್ಮ ದೇಹದ ತೊಂದರೆಯನ್ನು ಅಮಿತಾಭ್ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಅಮಿತಾಬ್ ಎಂಟು ವರ್ಷಗಳ ಕಾಲ ತಮಗೆ ಟಿಬಿ ಇದೆ ಎಂಬುದೇ ಗೊತ್ತಿರದ ಕಾರಣ ತಮಗೆ ಹೆಪಟೈಟಿಸ್ ಬಿ ಬಾಧಿಸಿದ್ದು ಅದರಿಂದ ಕೆಟ್ಟ ರಕ್ತ ಕಣಗಳು ಸೃಷ್ಟಿಯಾಗಿ ತಮ್ಮ ಲಿವರ್ ನ ಶೇ.75 ರಷ್ಟು ಭಾಗ ಹಾಳಾಗಿದೆ ಎಂದು ಹೇಳಿಕೊಂಡಿದ್ದಾರೆ.. ಈ ವಿಚಾರ ತಮಗೆ 20 ವರ್ಷಗಳ ನಂತರ ತಿಳಿದು ಬಂದಿದೆ…ತಾವೀಗ ಕೇವಲ ಶೇ.25 ಮಾತ್ರ ಕೆಲಸ ಮಾಡುವ ಲಿವರ್ ಮೇಲೆ ಬದುಕಿರುವುದಾಗಿ ತಿಳಿಸಿದ್ದಾರೆ.. ಪೊಲಿಯೋ, ಹೆಪಟೈಟಿಸ್ ಬಿ, ಟ್ಯೂಬರ್‌ಕ್ಯುಲೋಸಿಸ್ ಮತ್ತು ಡಯಾಬಿಟಿಸ್‌ನಂಥ ಕಾಯಿಲೆಗಳ ವಿರುದ್ಧ ಜಾಗೃತಿ ಮೂಡಿಸುವ ಅನೇಕ ಅಭಿಯಾನಗಳಲ್ಲಿ ಪಾಲ್ಗೊಂಡಿರುವ 76 ವರ್ಷದ ನಟ, ಸಮಸ್ಯೆ ಗೊತ್ತಾಗುವ ಮುನ್ನವೇ ಈ ಬಗ್ಗೆ ಡಯಗ್ನಾಸಿಸ್ ಮಾಡಿಸಿಕೊಳ್ಳಲು ಜನರಲ್ಲಿ ಮನವಿ ಮಾಡಿದ್ದಾರೆ. ಏನೇ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅದನ್ನು ಕಡೆಗಣಿಸದೇ ಒಳ್ಳೆಉ ಚಿಕಿತ್ಸೆಯನ್ನು ಪಡೆದುಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದಾರೆ..
Comments