ಲಾಯರ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್..!! ಯಾವ ಚಿತ್ರಕ್ಕಾಗಿ ಗೊತ್ತಾ..?

ಸ್ಯಾಂಡಲ್’ವುಡ್ ನ ಬಹು ಬೇಡಿಕೆಯ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.. ಸದ್ಯ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.. ಸುದೀಪ್ ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ಕೆಲವೊಂದು ಸಿನಿಮಾಗಳಲ್ಲಿ ಅತಿಥಿ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಇದೀಗ ರವಿಚಂದ್ರನ್ ಅಭಿನಯದ ಸಿನಿಮಾದಲ್ಲಿಯೂ ಕೂಡ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಸುದೀಪ್ ಮತ್ತು ರವಿಚಂದ್ರನ್. ಮಾಣಿಕ್ಯ, ಹೆಬ್ಬುಲಿ, ಅಪೂರ್ವ ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು..
ಇದೀಗ ರವಿ ಬೋಪಣ್ಣ ಸಿನಿಮಾದಲ್ಲಿಯೂ ಕೂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಸುದೀಪ್ ಪಾತ್ರ ಕೂಡ ರಿವಿಲ್ ಆಗಿದೆ. ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ್ ಲಾಯರ್ ಆಗಿ ಅಭಿನಯ ಮಾಡಿದ್ದಾರೆ.. ತಮ್ಮ ಭಾಗದ ಶೂಟಿಂಗ್ ಅನ್ನು ಕೂಡಾ ಮುಗಿಸಿಕೊಂಡಿದ್ದಾರೆ.. ಈ ಹಿಂದೆ ಅಪೂರ್ವ ಚಿತ್ರದಲ್ಲಿಯೂ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದರು. ಈಗ ರವಿ ಬೋಪಣ್ಣದಲ್ಲಿಯೂ ಅತಿಥಿ ಪಾತ್ರವನ್ನೇ ನಿರ್ವಹಿಸಿದ್ದಾರೆ. ಪಾತ್ರ ಚಿಕ್ಕದಿರಲಿ, ದೊಡ್ಡದೇ ಇರಲಿ… ರವಿಚಂದ್ರನ್ ನಿರ್ದೇಶನದಲ್ಲಿ ನಟಿಸೋದೇ ಖುಷಿಯ ವಿಚಾರ ಎಂಬ ಅಭಿಪ್ರಾಯವನ್ನೂ ಸುದೀಪ್ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಸುದೀಪ್ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ರವಿಚಂದ್ರನ್ ಕೂಡಾ ಹಂಚಿಕೊಂಡಿದ್ದಾರೆ.. ಲಾಯರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಕಾಣಿಸಿಕೊಂಡಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ..
Comments