ಇವರೇನಾ ಹುಚ್ಚ ವೆಂಕಟ್..!! ಹೇಗಿದ್ರು..ಹೇಗಾಗಿದ್ದಾರೆ ನೀವೆ ನೋಡಿ..!?
ಸ್ಯಾಂಡಲ್ ವುಡ್ನಲ್ಲಿ ಹುಚ್ಚ ವೆಂಕಟ್ ಅಂದ್ರೆ ಯಾರಿಗ್ ತಾನೆ ಗೊತ್ತಿಲ್ಲ… ವಿಭಿನ್ನ ಗೆಟಪ್ ಮೂಲಕವೇ ನನ್ ಎಕಡಾ ಅಂತಾನೇ ಫೇಮಸ್ ಆಗಿದ್ದ ವೆಂಕಟ್ ಸ್ಥಿತಿಯನ್ನು ನೋಡಿದರೆ ನಿಜಕ್ಕೂ ಶೋಚನೀಯ ಅನಿಸುತ್ತದೆ … ಹೆಣ್ಣು ಮಕ್ಕಳ ಪರವಾಗಿ ಯಾವಾಗಲೂ ಧನಿ ಎತ್ತುತ್ತಿದ್ದ ವೆಂಕಟ್ ಈಗ ಹೇಗಿದ್ದಾರೆ ಗೊತ್ತಾ.. ನೋಡಿದರೆ ನಿಮಗೆ ಶಾಕ್ ಆಗಬಹುದು ಅಷ್ಟೆ ಅಲ್ಲದೆ ಮನಸ್ಸು ಕರಗಬಹುದು..
ರಾಂಧವ ಚಿತ್ರತಂಡ ಚೆನ್ನೈಗೆ ಹೋಗಿದ್ದ ಸಮಯದಲ್ಲಿ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದಾರೆ. ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದೆ.. ಜೊತೆಗೆ ವೆಂಕಟ್ ಅವರ ರಕ್ಷಣೆಗೆ ನಮ್ಮ ತಂಡ ಮುಂದಾಗಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದೆ.. ‘ರಾಂಧವ’ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸಹ ನಿರ್ಮಾಪಕ ಮಂಜುನಾಥ್ ಅವರು ಚಿತ್ರದ ಯುಎಫ್‌ಒ ಅಪ್‌ಲೋಡ್‌ಗಾಗಿ ಚೆನ್ನೈಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಹುಚ್ಚ ವೆಂಕಟ್ ಬಂದು ರೂಮ್ ಕೇಳಿದ್ದಾರೆ. ಆದರೆ ಚಪ್ಪಲಿ ಇಲ್ಲದೇ, ಗಡ್ಡ ಬಿಟ್ಟು, ಕೊಳಕು ಬಟ್ಟೆಹಾಕಿದ್ದ ಅವರಿಗೆ ಹೋಟೆಲ್‌ನವರು ರೂಮ್ ಕೊಡಲು ನಿರಾಕರಿಸಿದ್ದಾರೆ. ಹಾಗಾಗಿ ಬೀದಿ ಬೀದಿಗಳಲ್ಲಿ ಹುಚ್ಚ ವೆಂಕಟ್ ಓಡಾಡುತ್ತಿದ್ದರು ಎಂದು ರಾಂಧವ ಚಿತ್ರತಂಡ ತಿಳಿಸಿದೆ. ಐಟಂ ಸಾಂಗ್ ಬ್ಯಾನ್ ಆಗಬೇಕು ಎಂದು ಯಾವಾಗಲೂ ಹೇಳುತ್ತಿದ್ದರು.. ಅಷ್ಟೆ ಅಲ್ಲದೆ ಬಿಗ್ ಬಾಸ್ ನಲ್ಲಿಯೂ ಕೂಡ ಸ್ಪರ್ಧಿಯಾಗಿದ್ದರು..
Comments