ಬ್ಯಾಡ್ ಬಾಯ್ ಸಲ್ಮಾನ್’ಗೆ ಕೂಡಿಬಂತಾ ಕಂಕಣ ಭಾಗ್ಯ..!?
ಸದ್ಯ ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಯಾರು ಅಂದ್ರೆ ಎಲ್ಲರಿಗು ನೆನಪಾಗುವುದೆ ಬ್ಯಾಡ್ ಬಾಯ್ ಸಲ್ಲು….. ಸಲ್ಲು ವಯಸ್ಸು 50 ದಾಟಿದರೂ ಇನ್ನೂ ಬ್ಯಾಚುಲರ್ ಆಗಿಯೇ ಇದ್ದಾರೆ… ಅವರ ಅಭಿಮಾನಿಗಳಿಗೆ ಸಲ್ಲು ಯಾವಾಗ ಮದುವೆಯಾಗುತ್ತಾರೆ ಎಂಬುದು ಕುತೂಹಲದ ವಿಷಯವಾಗಿತ್ತು.. ಇದೀಗ ಬಾಲಿವುಡ್ ಎಲೆಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರ ಎಂಬ ಪ್ರಶ್ನೆ ಮೂಡಿದೆ..
ಸಲ್ಮಾನ್ ಖಾನ್ಗೆ ಸೂಕ್ತವೆನಿಸುವ ಹುಡುಗಿ ಇನ್ನೂ ಸಿಕ್ಕಿಲ್ಲ. ಆದರೆ, ಈಗ ತಮ್ಮ ನಟನೆಯ ʼಯುವರಾಜʼ ಚಿತ್ರದ ನಟಿ ಝರೀನಾ ಖಾನ್, ನಾನು ಸಲ್ಮಾನ್ ಪತ್ನಿಯಾಗಲು ಬಯಸಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಆಶ್ಚರ್ಯ ಮತ್ತು ಕುತೂಹಲವನ್ನು ಎಲ್ಲರಲ್ಲಿಯೂ ಮೂಡಿಸಿದೆ. ಸಂದರ್ಶನದಲ್ಲಿ ಝರೀನಾ ತಮ್ಮ ವೃತ್ತಿಯಿಂದ ಸಲ್ಮಾನ್ ಖಾನ್ ಮದುವೆವರೆಗೆ ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ.. ನಾನು ಸಲ್ಮಾನ್ ಖಾನ್ ರನ್ನು ಮದುವೆಯಾಗುತ್ತಿದ್ದೇನೆ ಎಂಬ ತಮಾಷೆಯ ರೂಮರ್ ಅನ್ನು ಹರಡಲು ಬಯಸಿದ್ದೇನೆ ' ಎಂದು ತಿಳಿಸಿದ್ದಾರೆ… ಮದುವೆಯೆಂಬುದು ಒಂದು ಪರಿಶುದ್ದತೆ… ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.. ಸಲ್ಮಾನ್ ಖಾನ್ ಮದುವೆಯಾಗಲು ಇನ್ನೂ ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ.. ಅಭಿಮಾನಿಗಳು ಕೂಡ ಸಲ್ಲು ಮದುವೆಗೆ ಕಾತುರದಿಂದ ಕಾಯುತ್ತಿದ್ದಾರೆ..
Comments