10 ಕೋಟಿ ಆಫರ್ ಬೇಡ ಅಂದ್ರಂತೆ ಶಿಲ್ಪಾ ಶೆಟ್ಟಿ..! ಕಾರಣ ಏನ್ ಗೊತ್ತಾ..?
ತೆಳ್ಳನೆಯ ಮೈಮಾಟ ಹೊಂದಿರುವ ನಟಿ ಮಣಿಯರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಶಿಲ್ಪಾಶೆಟ್ಟಿಯ ಮೈಮಾಟಕ್ಕೆ ಫಿದಾ ಆದ ಅಭಿಮಾನಿಗಳೆಷ್ಟೊ.. ಶಿಲ್ಪಾ ಶೆಟ್ಟಿ ತಮ್ಮ ಆರೋಗ್ಯದ ವಿಚಾರವಾಗಿ ಸಾಕಷ್ಟು ಕಾಳಜಿ ವಹಿಸುತ್ತಾರೆ. . ಶಿಲ್ಪಾ ಶೆಟ್ಟಿ ಪ್ರತಿ ದಿನ ವ್ಯಾಯಾಮ, ಯೋಗ ಮಾಡುತ್ತಲೇ ಇರುತ್ತಾರೆ. ಡಯಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಆರೋಗ್ಯಕ್ಕೆ ಹೊಂದುವ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತಾರೆ.. ಹಾಗಾಗಿಯೇ ಈಗ್ಲೂ ಶಿಲ್ಪಾ ದಿ ಬೆಸ್ಟ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರೋದು.
ಅವರು ತುಂಬಾ ಫಿಟ್ ಆಗಿದ್ದಾರೆ. ಇದೇ ಕಾರಣಕ್ಕೆ 10 ಕೋಟಿ ಆಫರ್ ಒಂದನ್ನು ತಿರಸ್ಕರಿಸಿದ್ದಾರೆ. . ಸ್ಲಿಮ್ಮಿಂಗ್ ಮಾತ್ರೆ ಜಾಹೀರಾತಿಗೆ ಆಫರ್ ಬಂದಿತ್ತಂತೆ. 10 ಕೋಟಿ ರೂಪಾಯಿ ನೀಡಲು ಕಂಪನಿ ಮುಂದಾಗಿತ್ತಂತೆ. ಆದ್ರೆ ಶಿಲ್ಪಾ ಅದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿಗೆ ಆಯುರ್ವೇದ ಕಂಪನಿಯೊಂದು ಆಫರ್ ನೀಡಿತ್ತು ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶಿಲ್ಪಾ, ನನಗೆ ಭರವಸೆಯಿಲ್ಲದ ವಸ್ತುಗಳ ಜಾಹೀರಾತನ್ನು ನಾನು ಮಾಡುವುದಿಲ್ಲ. ಕೆಲವೊಂದು ಮಾತ್ರೆಗಳು ತಕ್ಷಣ ಪರಿಣಾಮ ಬೀರುತ್ತವೆ ಎಂದು ಕಂಪನಿಗಳು ಹೇಳುತ್ತವೆ. ಆದ್ರೆ ಉತ್ತಮ ಜೀವನಶೈಲಿ, ಆಹಾರ ಪದಾರ್ಥ ಸೇವನೆಗಿಂತ ಉತ್ತಮ ಮದ್ದಿಲ್ಲವೆಂದು ಹೇಳಿದ್ದರು. ಈಗಲೂ ಸಹ ಶಿಲ್ಪಶೆಟ್ಟಿ ಹದಿಹರೆಯದವನ್ನು ನಾಚಿಸುವಂತೆ ಇದ್ದಾರೆ.. ಇದಕ್ಕೆಲ್ಲಾ ಕಾರಣ ಅವರ ಜೀವನ ಶೈಲಿ ಎಂಬುದು ಅವರ ಅಭಿಪ್ರಾಯ
Comments