ಈ ಖ್ಯಾತ ನಟಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ರಾಮ್ ಗೋಪಾಲ್ ವರ್ಮಾ..!!

17 Aug 2019 2:44 PM | Entertainment
407 Report

ನಾವು ಯಾವಾಗಲೂ ಹೇಳುವ ಹಾಗೆ ಸಿನಿಮಾ ಮಂದಿ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ.. ಇದೀಗ ಬಾಲಿವುಡ್ ನಟಿ ಮತ್ತು ಮಾಡೆಲ್ ಆಗಿರುವ ಶೆರ್ಲಿನ್ ಚೋಪ್ರಾ ಸುದ್ದಿಯಾಗಿದ್ದಾರೆ..  ಅವರ ಹೇಳಿಕೆ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.. ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಅಚ್ಚರಿ ಪಡಬೇಕಾದ ಸುದ್ದಿಯೊಂದನ್ನು ತಿಳಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ವಯಸ್ಕರ ಚಿತ್ರಕ್ಕೆ ಪ್ರಪೋಸ್ ಮಾಡಿದ್ದು, ಅಶ್ಲೀಲ ವಿಡಿಯೋ ಕಳುಹಿಸಿದ್ದರೆಂದು ಶೆರ್ಲಿನ್ ಚೋಪ್ರಾ ಹೇಳಿಕೊಂಡಿದ್ದಾರೆ. .

ಎಸ್.. ಸ್ಪಾಟ್ ಬಾಯ್ ಸಂದರ್ಶನವೊಂದರಲ್ಲಿ  ಶೆರ್ಲಿನ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.. . 2016ರಲ್ಲಿ ಶೆರ್ಲಿನ್, ರಾಮ್ ಗೋಪಾಲ್ ವರ್ಮಾ ವಾಟ್ಸಾಪ್ ನಂಬರ್ ಗೆ ಕೆಲವೊಂದು ಫೋಟೋ ಕಳುಹಿಸಿದ್ದರಂತೆ. ತನ್ನ ಕೆಲಸದ ಬಗ್ಗೆ ಹೇಳಿದ್ದರಂತೆ. ವರ್ಮಾರ ಕೆಲ ಚಿತ್ರಗಳು ಇಷ್ಟವಾಗಿವೆ. ನಿಮ್ಮ ಚಿತ್ರದಲ್ಲಿ ನಟಿಸಲು ಇಷ್ಟಪಡ್ತೇನೆ ಎಂದು ಕಳುಹಿಸಿದ್ದರಂತೆ..  ತದ ನಂತರ ವರ್ಮಾ, ವಯಸ್ಕರ ಚಿತ್ರದ ಸ್ಕ್ರಿಪ್ಟ್ ಕಳುಹಿಸಿದ್ದರಂತೆ. ಇದು ನನ್ನ ಮುಂದಿನ ಚಿತ್ರ. ಇದ್ರಲ್ಲಿ ಕೆಲ ವಿಡಿಯೋ ಇದೆ ನೋಡು ಎಂದಿದ್ದರಂತೆ. ಈ ವಿಷಯದ ಬಗ್ಗೆ ವರ್ಮಾ ಜೊತೆ ಮಾತುಕತೆ ನಡೆದಿತ್ತಂತೆ. ಸನ್ನಿ ಲಿಯೋನ್ ಕೂಡ ಪೋರ್ನ್ ಚಿತ್ರದ ನಂತ್ರವೇ ಪ್ರಸಿದ್ದಿ ಪಡೆದಿದ್ದು, ನೀವು ಟ್ರೈ ಮಾಡಿ ಎಂದಿದ್ದರಂತೆ. ಒಟ್ಟಿನಲ್ಲಿ ಯಾವ ಸಮಯದಲ್ಲಿ ಯಾರು ಯಾರ ಬಗ್ಗೆ ಹೇಳಿಕೆ ಕೊಡುತ್ತಾರೆ ಎಂಬುದೆ ಗೊತ್ತಾಗುವುದಿಲ್ಲ… ಶೆರ್ಲಿನ್ ಚೋಪ್ರಾ ಕೊಟ್ಟಿರುವ ಈ ಹೇಳಿಕೆ ಇದೀಗ ಹೆಚ್ಚು ಸದ್ದು ಮಾಡುತ್ತಿದೆ.

Edited By

Manjula M

Reported By

Manjula M

Comments