ಹನಿಮೂನ್ ವೇಳೆ ತಪ್ಪು ಮಾಡಿದ ನಟಿ…? ಏನ್ ಗೊತ್ತಾ..?

16 Aug 2019 5:46 PM | Entertainment
469 Report

ಬಾಲಿವುಡ್ ಮಂದಿ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ.ಸ್ವಲ್ಪ ದಿನದಿಂದಲೂ ಬಾಲಿವುಡ್ ಕ್ವೀನ್ ರಾಕಿ ಸಾವಂತ್ ಸುದ್ದಿಯಲ್ಲಿದ್ದಾರೆ. ಸದ್ದಿಲ್ಲದೆ ಗುಟ್ಟಾಗಿ ಮದುವೆಯಾಗಿದೆ ಎಂದು ಹೇಳಿಕೊಂಡಿರುವ ರಾಕಿ ಸಾವಂತ್ ತನ್ನ ಗಂಡನ ಪೋಟೊವನ್ನು ಎಲ್ಲಿಯೂ ರಿವಿಲ್ ಮಾಡಿಲ್ಲ… ಸದ್ಯ ರಾಖಿ ಸಾವಂತ್ ಹನಿಮೂನ್ ಎಂಜಾಯ್ ಮಾಡ್ತಿದ್ದಾಳೆ.. ರಾಖಿ ಸಾವಂತ್ ಅಭಿಮಾನಿಗಳಿಗೆ ಹೇಳದೆ ಮದುವೆಯಾಗಿದ್ದಲ್ಲದೆ ಪತಿ ಫೋಟೋವನ್ನು ಇನ್ನೂ ಬಹಿರಂಗಗೊಳಿಸಿಲ್ಲ.

ಪತಿ, ಡೊನಾಲ್ಡ್ ಟ್ರಂಪ್ ಕಂಪನಿಯಲ್ಲಿ ಕೆಲಸ ಮಾಡ್ತಾರೆ. ಅವರಿಗೆ ಮೀಡಿಯಾ ಹುಚ್ಚಿಲ್ಲ ಎಂದಿರುವ ರಾಖಿ ಮದುವೆಯಾಗಿ ವಾರ ಕಳೆದ್ರೂ ಪತಿ ಫೋಟೋ ಹಾಕಿಲ್ಲ.ಆದ್ರೆ ಇಷ್ಟು ದಿನ ಪತಿ ಗುಟ್ಟು ಮುಚ್ಚಿಟ್ಟಿದ್ದ ರಾಖಿ ಇದೀಗ ಯಡವಟ್ಟು ಮಾಡಿದ್ದಾಳೆ. ರಾಖಿ ಸಾವಂತ್ ತಪ್ಪಿನಿಂದ ಆಕೆ ಪತಿ ಮುಖ ಅಲ್ಪಸ್ವಲ್ಪ ಬಹಿರಂಗವಾಗಿದೆ. ರಾಖಿ ಕಪ್ಪು ಕನ್ನಡಕ ಧರಿಸಿ ಫೋಸ್ ನೀಡ್ತಿದ್ದಾಳೆ. ಈ ಫೋಟೋವನ್ನು ಪತಿ ಕ್ಲಿಕ್ಕಿಸುತ್ತಿದ್ದಾರೆ. ಆದ್ರೆ ರಾಖಿ ಕಪ್ಪು ಗ್ಲಾಸ್ ನಲ್ಲಿ ಪತಿ ಮುಖ ಸ್ವಲ್ಪ ಕಾಣುತ್ತಿದೆ... ಈ ಫೋಟೋ ಹಾಕಿರುವ ರಾಖಿ, ಇದು ಹನಿಮೂನ್ ಫೋಟೋ. ನನ್ನ ಪತಿ ಬೆಸ್ಟ್. ನಾನು ಆತನನ್ನು ಪ್ರೀತಿ ಮಾಡ್ತೇನೆ ಎಂದು ಶೀರ್ಷಿಕೆ ಹಾಕಿದ್ದಾಳೆ. ಸದ್ಯ ರಾಕಿ ಸಾವಂತ್ ಹನಿಮೂನ್ ಖುಷಿಯಲ್ಲಿದ್ದಾರೆ.. ಪತಿಯ ಮುಖವನ್ನು ರಾಕಿ ಯಾವಾಗ ಅಭಿಮಾನಿಗಳಿಗೆ ತೋರಿಸುತ್ತಾರೋ ಕಾದು ನೋಡಿದೆ.

Edited By

Manjula M

Reported By

Manjula M

Comments