ಸ್ಯಾಂಡಲ್’ವುಡ್ ನ ಪದ್ಮಾವತಿಯ ಮದುವೆಯಂತೆ..!! ಹುಡುಗ ಯಾರ್ ಗೊತ್ತಾ..?

ಅಂದಹಾಗೆ ಸ್ಯಾಂಡಲ್ ವುಡ್ ನ ಪದ್ಮಾವತಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ… ಸ್ಯಾಂಡಲ್ವುಡ್ ನಲ್ಲಿ ತನ್ನದೆ ಆದ ಕ್ರೇಜ್ ಕ್ರಿಯೆಟ್ ಮಾಡಿದ್ದ ರಮ್ಯಾ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು ಗೊತ್ತಾ..? ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ರಮ್ಯಾ ಅದ್ಯಾಕೋ ಸ್ಯಾಂಡಲ್ ವುಡ್ ನಿಂದ ದುರಾನೇ ಉಳಿದುಬಿಟ್ಟರು… ಮೋಹಕ ತಾರೆ ರಮ್ಯಾ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. .. 2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಪ್ರಾರಂಭ ಮಾಡಿದರು..
ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ವರ್ಷ ನಂಬರ್ 1 ನಟಿಯಾಗಿ ಮಿಂಚಿದ್ದ ಮೋಹಕ ತಾರೆ, ರಾಜಕಾರಣಿ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಕಾಂಗ್ರೆಸ್ ಜಾಲತಾಣದ ಹೆಡ್ ಆಗಿಯೂ ಕೆಲಸ ಮಾಡಿದ್ದ ರಮ್ಯಾ ತಮ್ಮ ಬಹುಕಾಲದ ಗೆಳೆಯ ಪೋರ್ಚುಗಲ್ ದೇಶದ ರಾಫೆಲ್ ಎಂಬ ಉದ್ಯಮಿಯ ವರಿಸಲಿದ್ದಾರೆ. ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅಭಿನಯದ ಸಂಜು ಮತ್ತು ಗೀತಾ ಚಿತ್ರದ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ರಮ್ಯಾ-ರಾಫೆಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾದ ನಂತರ ರಮ್ಯಾ ಕನ್ನಡದ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಸಾಕಷ್ಟು ವಿಚಾರಕ್ಕೆ ನೆಟ್ಟಿಗರ ಟ್ರೋಲಿಗೆ ಗುರಿಯಾಗಿದ್ದರು.. ಅದೆಷ್ಟೆ ಅಲ್ಲದೆ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ ಬಾರದ ರಮ್ಯಾ ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಂಆಡಿದ್ದರು.. ಇಧೀಗ ರಮ್ಯ ಮತ್ತೆ ಮದುವೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ..
Comments