ಚಾಲಕನಿಂದ 500 ರೂ ಪಡೆದ ಜಾಹ್ನವಿ ಕಪೂರ್..!!
ಪ್ರಸಿದ್ದ ನಟಿ ಮಣಿಯರ ಸಾಲಿಗೆ ಜಾಹ್ನವಿ ಕಪೂರ್ ಕೂಡ ಸೇರಿಕೊಳ್ಳುತ್ತಾರೆ. ಸದ್ಯ ಜಾಹ್ನವಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ವೈರಲ್ ಆಗಿದೆ.. ಆ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯಕ್ಕೆ ಜಾಹ್ನವಿ ನಟಿಸಿದ ಒಂದೇ ಚಿತ್ರ ಸದ್ಯ ಬಿಡುಗಡೆಯಾಗಿದೆ
ಜಾಹ್ನವಿ ಪುಸ್ತಕ ಮಾರಾಟ ಮಾಡ್ತಿದ್ದ ಹುಡುಗನಿಗೆ ಸಹಾಯ ಮಾಡಿದ್ದಾಳೆ. ರಸ್ತೆಯಲ್ಲಿ ಬರ್ತಿದ್ದ ಜಾಹ್ನವಿ ಬಳಿ ಹುಡುಗ ಪುಸ್ತಕ ಮಾರುತ್ತ ಬರ್ತಾನೆ. ಅದನ್ನು ನೋಡಿದ ಜಾಹ್ನವಿ ಕಾರಿನೊಳಗೆ ಹೋಗಿ ಪರ್ಸ್ ತಡಕಾಡ್ತಾಳೆ. ಆದ್ರೆ ಪರ್ಸ್ ನಲ್ಲಿ ಹಣವಿರುವುದಿಲ್ಲ. ಆಗ ಚಾಲಕನ ಬಳಿ 500 ರೂಪಾಯಿ ಪಡೆದು ಜಾಹ್ನವಿ ಹುಡುಗನಿಗೆ ನೀಡಿದ್ದಾಳೆ.. ಈ ವಿಡೀಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಜಾಹ್ನವಿ ಹಣ ಕೊಟ್ಟಿದನ್ನು ನೋಡಿ ಶಹಬ್ಬಾಸ್ ಎಂದಿದ್ದಾರೆ… ಬಡ ಮಕ್ಕಳಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಜಾಹ್ನವಿ ಕಪೂರ್ ತುಂಬು ಹೃದಯದಿಂದ ಆ ಹುಡುಗನಿಗೆ ಸಹಾಯ ಮಾಡಿರುವುದು ಅಭಿಮಾನಿಗಳಿಗೆ ಖುಷಿಯಾಗಿದೆ.
Comments