ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಸುದೀಪ್ ಹೆಸರು..!!
ನೆನ್ನೆಯಷ್ಟೆ ಬೆಂಗಳೂರಿನ ಮಂತ್ರಿಮಾಲ್ ಬಳಿ ನಟ ಕೋಮಲ್ ಮೇಲೆ ಹಲ್ಲೆ ಮಾಡಲಾಗಿದೆ.. ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಗಲಾಟೆ ಮಾಡಿ ಕೋಮಲ್ ಗೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ… ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಜಗ್ಗೇಶ್ ಅವರು ತಮ್ಮನ ಮೇಲಿನ ಹಲ್ಲೆಗೆ ಕೋಪಿಸಿಕೊಂಡು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲ ನೆಟ್ಟಿಗರು ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣದ ಹಿಂದೆ ಕಿಚ್ಚ ಸುದೀಪ್ ಇದ್ದಾರೆ ಎಂದು ಸಂಶಯ ವ್ಯಕ್ತಪಡಿಸಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಜಗ್ಗೇಶ್, ವೈಯಕ್ತಿಕ ಅನಿಸಿಕೆ ನಿರ್ಧಾರ ಮಾಡಿ ನನ್ನ ಕಲಾಬಂಧು ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲ, ಸುದೀಪ್ ನನ್ನ ಒಡಹುಟ್ಟದಿದ್ದರೂ, ನನ್ನ ಹೆಮ್ಮೆಯ ತಮ್ಮನಂತೆ, ಅವನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು, ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ, ಆದರೆ ಮನಸ್ಸನ್ನು ಕೆಡಿಸದರಿ, ಧನ್ಯವಾದಗಳು ಎಂದು ಮನವಿ ಮಾಡಿದ್ದಾರೆ. ನಟ ಕೋಮಲ್ ಮೇಲೆ ಹಲ್ಲೆ ಮಾಡಿರುವವರು ಬೇಕಂತಲೆ ಹಲ್ಲೆ ಮಾಡಿದ್ದಾರೆ..ಅವರು ಯಾರೇ ಆದರೂ ಸರಿ ನಾನು ಬಿಡುವುದಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಕಿಡಿಕಾರಿದ್ದಾರೆ.
Comments