‘ನೀನಂದ್ರೆ ನನಗೆ ತುಂಬಾ ಇಷ್ಟ’ ಅಂತ ವಿಜಯ ದೇವರಕೊಂಡಗೆ ಹೇಳಿದ್ ಯಾರ್ ಗೊತ್ತಾ..?
ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತವೆ ಎಂದರೆ ಸಾಮಾನ್ಯ ಜನರನ್ನು ಕೂಡ ಒಂದೆ ಒಂದು ರಾತ್ರಿಗೆ ಸೆಲಬ್ರೆಟಿ ಮಾಡಿ ಬಿಡುತ್ತದೆ.. ಅಷ್ಟರ ಮಟ್ಟಿಗೆ ಸೋಷಿಯಲ್ ಮಿಡೀಯಾ ಹವಾ ಸೃಷ್ಟಿಸಿವೆ.. ಅದೆಷ್ಟೋ ಸ್ಟಾರ್ಗಳು ಸೋಷಿಯಲ್ ಮೀಡಿಯಾದ ಮೂಲವೇ ಹವಾ ಕ್ರಿಯೇಟ್ ಮಾಡಿದ್ದು ಕೂಡ ಉಂಟು.. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಸನ್ನೆಯ ಮೂಲಕ ಹವಾ ಸೃಷ್ಟಿಸಿದ್ದು ಪ್ರಿಯಾ ಪ್ರಕಾಶ್ ವಾರಿಯರ್.. ಹೌದು ಆಕೆ ತನ್ನ ಕಣ್ಸನ್ನೆಯ ಮೂಲಕವೇ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ..
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಣ್ಣಿನ ಮೂಲಕ ಸದ್ದು ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅರ್ಜನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.. ಪ್ರಿಯಾ ವಾರಿಯರ್ ಇತ್ತೀಚಿಗೆ ವಿಜಯ್ ದೇವರಕೊಂಡ ಅವರನ್ನು ಭೇಟಿಯಾಗಿದ್ದು, ಈ ವೇಳೆ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ನೀನಂದ್ರೆ ನನಗೆ ತಂಬಾ ಇಷ್ಟ ಎಂದು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ. ಈಗ ಪ್ರಿಯಾ ವಾರಿಯರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲಯಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಚಿತ್ರವನ್ನು ಇಲ್ಲಿವರಿಗೆ 4.93 ಲಕ್ಷ ಮಂದಿ ಇಷ್ಟಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಿಯಾಗೆ ವಿಜಯ್ ದೇವರಕೊಂಡ ಅಂದ್ರೆ ಇಷ್ಟವಂತೆ.. ಮುಂದೆ ಅವರಿಬ್ಬರ ಕಾಂಬಿನೇಷನ್’ನಲ್ಲಿ ಸಿನಿಮಾವೊಂದು ಬಂದರೂ ಕೂಡ ಬರಬಹುದು
Comments