ಎಂಗೇಜ್ ಮೆಂಟ್ ಡೇ ಯ ಸಂಭ್ರಮದಲ್ಲಿ ರಾಕಿಂಗ್ ಜೋಡಿ..!!

12 Aug 2019 1:03 PM | Entertainment
354 Report

ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ರಾಕಿಂಗ್ ಸ್ಟಾರ್ ಜೋಡಿ ಕೂಡ ಒಂದು..ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಮತ್ತು ರಾಕಿಂಗ್ ಸ್ಟಾರ್ ಯಶ್ ಇಂದು ಸಖತ್ ಖುಷಿಯಲ್ಲಿದ್ದಾರೆ..  ಸ್ಯಾಂಡಲ್ ವುಡ್ ನ ಮೋಸ್ಟ್ ಹಾಟ್ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿವಾಹ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ... ಇದೇ ದಿನ ಗೋವಾದಲ್ಲಿ ಯಶ್ ಮತ್ತು ರಾಧಿಕ ಪಂಡಿತ್ ನಿಶ್ಚಿತಾರ್ಥ ನಡೆದಿತ್ತು.. ಈ ವಿಶೇಷ ದಿನದಂದು ರಾಧಿಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಆ ವಿಡಿಯೋದಲ್ಲಿ ರಾಕಿಂಗ್ ಜೋಡಿಯ ಇನ್ನೊಂದು ಮುಖ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.  ಈಗಲೂ ನಾನು ನಿನ್ನ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದೇನೆ ಎಂದು ರಾಧಿಕಾ ತಮಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.. . ಈ ವಿಡಿಯೋದಲ್ಲಿ ಯಶ್ ಅವರು  ರಾಧಿಕಾಳನ್ನು ಗೊಂಬೆಯಂತೆ ತನಗೆ ಬೇಕಾದ ಸ್ಟೆಪ್ ಹಾಕಿಸಿ ಕೆಜಿಎಫ್ ಚಿತ್ರದ ಗಲಿ ಗಲಿ ಹಾಡಿಗೆ ಸಖತ್ ಆಗಿಯೇ ಸ್ಟೆಪ್ ಹಾಕಿಸಿದ್ದಾರೆ.. ಈ ಫನ್ನಿ ವಿಡಿಯೋ ನೋಡಿ ಸಾವಿರಾರು ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ನೀವು ಏನೇ ಮಾಡಿದ್ರೂ ಸೂಪರ್ ಬಿಡ್ರೀ ಎಂದಿದ್ದಾರೆ. ಒಟ್ಟಿನಲ್ಲಿ ಯಶ್ ಮತ್ತು ರಾಧಿಕ ಮಗಳ ಜೊತೆ ಖುಷಿಯಲ್ಲಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ನಿಮಗೆ ಗಂಡು ಮಗುವೇ ಆಗುವುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Edited By

Manjula M

Reported By

Manjula M

Comments