ಬಾಹುಬಲಿ ಖ್ಯಾತಿಯ ಪ್ರಭಾಸ್ ಮದುವೆಯಂತೆ..! ಹುಡುಗಿ ಯಾರ್ ಗೊತ್ತಾ..?
ಕೆಲ ವರ್ಷಗಳಿಂದ ಬಾಹುಬಲಿ ಖ್ಯಾತಿಯ ಪ್ರಭಾಸ್ ಮದುವೆಯ ವಿಚಾರ ಹರಿದಾಡುತ್ತಿದೆ.. ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿಯ ಹೆಸರು ತಳುಕು ಹಾಕಿಕೊಂಡಿತ್ತು.. ಅವರಿಬ್ಬರನ್ನು ತೆರೆ ಮೇಲೆ ನೋಡಿದ ಅಭಿಮಾನಿಗಳು ಮೇಡ್ ಪಾರ್ ಈಚ್ ಅದರ್ ಎನ್ನುತ್ತಿದ್ದರು.. ಕೆಲವೊಂದು ಕಾರ್ಯಕ್ರಮಗಳಲ್ಲೂ ಕೂಡ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಮದುವೆಯ ವಿಚಾರಕ್ಕೆ ಪುಷ್ಟಿ ನೀಡುವಂತೆ ಇತ್ತು… ಆದರೆ ಈ ವಿಷಯದ ಬಗ್ಗೆ ಅನುಷ್ಕಾವಾಗಲಿ ಅಥವಾ ಪ್ರಭಾಸ್ ಆಗಲಿ ಎಲ್ಲಿಯೂ ಕೂಡ ಮಾತನಾಡಿರಲಿಲ್ಲ… ನಮ್ಮಿಬ್ಬರ ಮದ್ಯೆ ಏನು ಇಲ್ಲ ಎಂದಿದ್ದರು.. ಇದೀಗ ಮತ್ತೆ ಪ್ರಭಾಸ್ ಮದುವೆಯ ವಿಚಾರ ಹರಿದಾಡುತ್ತಿದೆ.
ಬಾಹುಬಲಿ ಖ್ಯಾತಿಯ ಪ್ರಭಾಸ್ ಮದುವೆ ಬಗ್ಗೆ ಮತ್ತೆ ರೂಮರ್ ಹಬ್ಬಿದೆ. ಪ್ರಭಾಸ್ ಉದ್ಯಮಿ ಪುತ್ರಿಯೊಬ್ಬರ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಮೆರಿಕಾ ಮೂಲದ ಉದ್ಯಮಿಯೊಬ್ಬರ ಪುತ್ರಿಯ ಜತೆ ವಿವಾಹವಾಗಲಿದ್ದಾರೆ. ಸಾಹೋ ಚಿತ್ರ ರೀಲಿಸ್ ಆದ ಬಳಿಕ ಈ ಬಗ್ಗೆ ಅನೌನ್ಸ್ ಮಾಡಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ.. ಆದರೆ ಇದು ನಿಜವಲ್ಲ ಎಂದು ಪ್ರಭಾಸ್ ಆಪ್ತ ಮೂಲಗಳು ಹೇಳುತ್ತಿವೆ. ಪ್ರಭಾಸ್ ಗೆ ಸದ್ಯಕ್ಕೆ ವಿವಾಹವಾಗುವ ಯೋಜನೆಯಿಲ್ಲ ಎಂದು ಅವರ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.. ಆಗಿಂದಾಗೆ ಪ್ರಭಾಸ್ ಮದುವೆಯ ವಿಚಾರದ ಬಗ್ಗೆ ಸುದ್ದಿಯಾಗುತ್ತಲೆ ಇದೆ.
Comments