40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ..!! ಕಾರಣ ಏನ್ ಗೊತ್ತಾ..?

ಅಂದಹಾಗೆ ಸಿನಿಮಾ ಜಗತ್ತಿನಲ್ಲಿ ಒಂದೊಳ್ಳೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದರೆ ಸಾಕು.. ಆ ಸಿನಿಮಾದ ನಾಯಕ ಮತ್ತು ನಾಯಕಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ನೋಡೌಟ್.. ಇನ್ನೂ ಬೇಡಿಕೆಯಷ್ಟೆ ಅಲ್ಗ ಅವರ ಸಂಭಾವನೆ ಕೂಡ ದುಪ್ಪಟ್ಟು ಆಗುತ್ತದೆ.. ಹೌದು ಅದೇ ಸಾಲಿಗೆ ಸೇರುವ ನಟರಲ್ಲಿ ವಿಜಯ್ ದೇವರಕೊಂಡ ಕೂಡ ಒಬ್ಬರು.. ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ.
ಇದೆಲ್ಲದರ ಮದ್ಯೆ ವಿಜಯ್ ದೇವರಕೊಂಡ ಬಗ್ಗೆ ಮತ್ತೊಂದು ವಿಷಯ ಹರಿದಾಡುತ್ತಿದೆ.., ಡಿಯರ್ ಕಾಮ್ರೆಡ್ ಸಿನಿಮಾ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ತಾಗಿಯೇ ಹರಿದಾಡುತ್ತಿದೆ.. ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ ಅವರನ್ನ ಪರಿಚಯಿಸಲು ಇಷ್ಟಪಟ್ಟಿದ್ದರು. ಅದರಂತೆಯೇ ರೀಮೇಕ್ ಸಿನಿಮಾಗಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲ್ಯಾನ್ ಮಾಡಿದ್ದರು.ಆದರೆ ದೇವರಕೊಂಡ ಸಿನಿಮಾದಲ್ಲಿ ಮಾಡುವುದಿಲ್ಲ ಎಂದಿದ್ದಾರಂತೆ. ಅದಕ್ಕಾಗಿ ಕರಣ್ ಜೋಹರ್ ಅವರು ವಿಜಯ್‍ಗೆ ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದ್ದರು.. ಆದರೂ ವಿಜಯ್ ಆ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.ಒಂದೇ ರೀತಿಯ ಸಿನಿಮಾವನ್ನು ಮಾಡುವುದು ನನಗೆ ಇಷ್ವಾಗುವುದಿಲ್ಲ ಎಂದಿದ್ದಾರೆ.
Comments