ನಿಖಿಲ್ ಕುಮಾರಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತಾ..?
ಸದ್ಯ ಸ್ಯಾಂಡಲ್ ವುಡ್ ನಲ್ಲಿಯೂ ಕೂಡ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.. ಅದಕ್ಕೆ ಪುಷ್ಟಿ ನೀಡಿದ್ದು ಲೋಕಸಭಾ ಚುನಾವಣೆ.. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಿದ್ದ ದರ್ಶನ್ ಮತ್ತು ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿದ್ದ ನಿಖಿಲ್ ಮಧ್ಯೆ ಯುದ್ದವೇ ನಡೆಯುತ್ತಿದೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು.ಇದೀಗ ನಟ ದರ್ಶನ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ನಿಖಿಲ್ ನಾನು ಪಾಂಡವರ ಕಡೆ ಇರುವವನು. ಆದ್ದರಿಂದ ನನಗೆ ದರ್ಶನ್ ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುವ ಅವಕಾಶ ಲಭ್ಯವಾಗಿಲ್ಲ. ಆದರೆ ನಾನು ದರ್ಶನ್ ಅವರೊಂದಿಗೆ ಒಟ್ಟಾಗಿ ಕುಳಿತುಕೊಂಡು ಸಿನಿಮಾ ಪ್ರಚಾರದಲ್ಲಿ ಭಾಗವಹಿಸಲು ಯಾವುದೇ ಅಭ್ಯಂತರವಿಲ್ಲ. ಖಂಡಿತ ಇಬ್ಬರೂ ಒಟ್ಟಿಗೆ ಕುರುಕ್ಷೇತ್ರ ಪ್ರಚಾರದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದರು, ವೈಯಕ್ತಿಕ ವಿಚಾರಗಳೇ ಬೇರೆ, ಕೆಲಸವೇ ಬೇರೆ ಒಂದಕ್ಕೊಂದು ಸಂಬಂಧವನ್ನು ಕಲ್ಪಿಸಬೇಡಿ ಎಂದರು.. ಈ ರೀತಿಯ ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡಲು ಮುಂದೇ ಬಂದ ನಿರ್ಮಾಪಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ದರ್ಶನ್ ಒಟ್ಟಾಗಿಯೇ ಸಿನಿಮಾ ಪ್ರಚಾರ ಮಾಡುತ್ತೇವೆ ಎಂದರು.. ಅಂದಹಾಗೆ ಚಂದನವನದ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಸಿನಿಮಾ ಇದೆ ತಿಂಗಳು 9 ರಂದು ಬಿಡುಗಡೆಯಾಗಲಿದೆ
Comments