ಕೋಟಿಗೊಬ್ಬ-3’ ಟೀಂಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟ..!

ಸದ್ಯ ಸ್ಯಾಂಡಲ್ ವುಡ್ ಸಿನಿಮಾ ಅಂಗಳದಲ್ಲಿ ಬಹುಬೇಡಿಕೆಯ ನಟರಲ್ಲಿ ಸುದೀಪ್ ಕೂಡ ಒಬ್ಬರು.. ಸ್ಯಾಂಡಲ್ ವುಡ್ ನಟರು ಪರಭಾಷೆಗಳಲ್ಲಿಯ ಕೂಡ ಮಿಂಚುತ್ತಿದ್ದಾರೆ.. ಅದಷ್ಟೆ ಅಲ್ಲದೆ ಬಾಲಿವುಡ್ ನಟರು ಕೂಡ ಸ್ಯಾಂಡಲ್ ವುಡ್ ನತ್ತ ಮುಖ ಮಾಡುತ್ತಿದ್ದಾರೆ.. ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಸಿನಿಮಾಗೆ ಬಾಲಿವುಡ್ ನಟರೊಬ್ಬರು ಎಂಟ್ರಿ ಕೊಡಲಿದ್ದಾರೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕಿಚ್ಚ ಸುದೀಪ್ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ..
ಕಿಚ್ಚ ಸುದೀಪ್ ಮತ್ತು ಅಫ್ತಾಬ್ ಶಿವದಾಸನಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.. ಕೊಟಿಗೊಬ್ಬ ಸಿನಿಮಾ ಮಾಸ್ ಆ್ಯಂಡ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಶಿವದಾಸನಿ ತೆರೆ ಮೇಲೆ ಮಿಂಚಲಿದ್ದಾರೆ. “ಕೋಟಿಗೊಬ್ಬ-3′ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಎಂದು ಅಫ್ತಾಬ್ ಶಿವದಾಸನಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.. ಚಂದನವನದ ಹೈಬಜೆಟ್ ಸಿನಿಮಾ ಇದಾಗಿದ್ದು ಚಿತ್ರಿಕರಣ ಪ್ರಾರಂಭವಾದ ಮೇಲೆ ಬಾಲಿವುಡ್ ನಟ ಕೋಟಿಗೊಬ್ಬ 3 ತಂಡವನ್ನು ಸೇರಿಕೊಳ್ಳಲಿದ್ದಾರೆ.
Comments