ನಟಿ ಕಾಜಲ್‍ಗಾಗಿ ಹಣ ಕಳೆದುಕೊಂಡ ಅಭಿಮಾನಿ..!! ಕಳೆದುಕೊಂಡ ಹಣವೆಷ್ಟು ಗೊತ್ತಾ..?

ಅಭಿಮಾನಿಗಳ ಅಭಿಮಾನಕ್ಕೆ ಕೊನೆಯೇ ಇಲ್ಲ… ತಮ್ಮ ನೆಚ್ಚಿನ ನಟ ನಟಿಯರನ್ನು ನೋಡಲು ಏನು ಬೇಕಾದರೂ ಕೂಡ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿ ಉತ್ತಮ ನಿದರ್ಶನವಿದೆ ನೋಡಿ.. ಟಾಲಿವುಡ್ ಮೋಸ್ಟ್ ಬ್ಯೂಟಿಫುಲ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ. ಎಂತಹ ಅಭಿಮಾನಿಯನ್ನು ಸಂಪಾದಿಸಿಕೊಂಡಿದ್ದಾರೆ ಎಂದು ಖುಷಿ ಪಡಬೇಕೋ ಅಥವಾ ಮೂರ್ಖ ಅನ್ನೋಬೇಕೋ ಗೊತ್ತಿಲ್ಲ…
ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿಯಾಗಿದ್ದರು... ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ಇನ್‍ಸ್ಟಾಗ್ರಾಂ ಪೇಜ್ ಒಂದು ಕಾಜಲ್ ಅಗರ್‌ವಾಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ನೀಡಿತ್ತು. ಇದನ್ನು ನೋಡಿದ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು. ಇದನ್ನೆ ಬಂಡವಾಳ ಮಾಡಿಕೊಂಡ ಅವರು ಆತನ ಬಳಿ ಮೊದಲು 50.000 ರೂ ಪಡೆದಿದ್ದಾರೆ.. ನಂತರ ಆತನ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ.. ಕಾಜಲ್‍ರನ್ನು ಭೇಟಿ ಮಾಡುವ ಖುಷಿಯಲ್ಲಿ ಅಭಿಮಾನಿ ಯೋಚಿಸದೇ ಎಲ್ಲ ವಿವರವನ್ನು ಆಡ್ಮಿನ್ ಗೆ ಕೊಟ್ಟಿದ್ದಾನೆ.. ಈ ವೆಬ್‍ಪೇಜ್ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದು, ಕಾಜಲ್ ಅಭಿಮಾನಿಯನ್ನು ಯಾಮಾರಿಸಿದೆ. ಅಭಿಮಾನಿ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾದ ಬಳಿಕ ಈ ಗ್ಯಾಂಗ್ ಸದಸ್ಯರು ಪ್ರತಿದಿನ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಒಟ್ಟಾರೆಯಾಗಿ ಆತ 60 ಲಕ್ಷ ಹಣವನ್ನು ಕಾಜಲ್ ಆಗಿ ಕಳೆದುಕೊಂಡಿದ್ದಾನೆ.
Comments