ನಾನು ಬೆತ್ತಲೆಯಾಗಿ ಅಭಿನಯಿಸಲು ಸಿದ್ದ ಎಂದ ನಟಿ..!!

ಇತ್ತಿಚಿಗೆ ನಟಿಯರು ಸಿನಿಮಾಗಳಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಮೊನ್ನೆ ಮೊನ್ನೆಯಷ್ಟೆ ಬಹುಭಾಷ ನಟಿ ಅಮಲಾಪೌಲ್ ಇದೇ ವಿಷಯಕ್ಕಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.. ಅಮಲಾ ಪೌಲ್ 'ಅಡೈ' ಸಿನಿಮಾದಲ್ಲಿ ಬೆತ್ತಲೆಯಾಗಿ ಅಭಿನಯಿಸುವ ಮೂಲಕ ಎಲ್ಲರಿಗೂ ಕೂಡ ಶಾಕ್ ನೀಡಿದ್ದರು.. ಈ ದೃಶ್ಯ ನೋಡಿ ಇಡೀ ಸೌತ್ ಇಂಡಸ್ಟ್ರಿ ಒಂದು ಕ್ಷಣ ಬೆಕ್ಕಸ ಬೆರಗಾಗಿತ್ತು.. ಅಮಲಾ ಪೌಲ್ ನಿಜಕ್ಕೂ ನಗ್ನವಾಗಿ ನಟಿಸಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕೂಡ ಮೂಡಿದ್ದಂತೂ ಸುಳ್ಳಲ್ಲ.
ಎಸ್.. ನಟಿಮಣಿಯರು ಎಂತಹ ಪಾತ್ರವಾದರೂ ಕೂಡ ಸೈ ಎನ್ನುವಂತೆ ಇದ್ದಾರೆ.. ಇದೀಗ ಮತ್ತೊಬ್ಬ ಯುವನಟಿ ಕೂಡ ನಾನು ಬೆತ್ತಲೆಯಾಗಿ ಅಭಿನಯಿಸಲು ಸಿದ್ದ ಎಂದಿದ್ದಾರೆ.. ಆ ನಟಿ ಬೇರೆ ಯಾರು ಅಲ್ಲ.. ತೆಲುಗು ನಟಿ ಬಿಂದು ಮಾಧವಿ… , ನಾನು ನಗ್ನವಾಗಿ ನಟಿಸಲು ಸಿದ್ಧ'' ಎಂದು ನಟಿ ತಿಳಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು... ಹೀರೋಗಳಷ್ಟೆ ಹೀರೋಯಿನ್ ಗಳು ಕೂಡ ಅಭಿನಯಿಸಬಲ್ಲರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಾಯಕಿಯರಿಗೆ ಹೆಚ್ಚು ಮಹತ್ವವಿರಬೇಕು. ಆಗ ನಾನು ನಗ್ನವಾಗಿ ಅಭಿನಯಿಸುತ್ತೇನೆ ಎಂದು ತೆಲುಗು ನಟಿ ಬಿಂದು ಮಾಧವಿ ತಿಳಿಸಿದ್ದಾರೆ. ಮಾಡೆಲ್ ಕ್ಷೇತ್ರದಿಂದ ವೃತ್ತಿ ಜೀವನವನ್ನು ಪ್ರಾರಂಭಿಸಿದ ಈಕೆ ನಂತರ ಸಿನಿಮಾ ಜಗತ್ತಿಗೆ ಕಾಲಿಟ್ಟರು.. ಬಿಂದು, ಬಿಗ್ ಬಾಸ್ ಮೊದಲನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.. ಇನ್ನೂ ನಟಿ ಮಣಿಯರು ಯಾವ ರೀತಿ ಪಾತ್ರವಾದರೂ ಮಾಡುತ್ತೇನೆ ಎಂದು ಹೇಳಿದ ಮೇಲೆ ಬಣ್ಣದ ಜಗತ್ತು ಎಷ್ಟರ ಅವರನ್ನು ಆಕರ್ಷಿಸಿರುತ್ತದೆ ಎಂಬುದನ್ನು ನೀವೆ ಯೋಚನೆ ಮಾಡಿ..
Comments