ಚಂದನವನದ ಈ ಜೋಡಿ ದಾಂಪತ್ಯದಲ್ಲಿ ಬಿರುಕು..!? ಕಾರಣ..?
ಅಂದಹಾಗೆ ಚಂದನವನದ ಸಾಕಷ್ಟು ಜೋಡಿಗಳು ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿರೋದನ್ನ ನೋಡಿದ್ದೇವೆ.. ಇನ್ನೂ ಕೆಲವರು ಬುದ್ದಿ ಬಂದು ಸಂಸಾರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.. ಇದೀಗ ಖ್ಯಾತ ನಿರ್ದೇಶಕರಾದ ಹರಿಕೃಷ್ಣ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.. ಈ ರೀತಿಯ ಅನುಮಾನ ಹುಟ್ಟಿಕೊಂಡಿರುವುದಕ್ಕೆ ಕಾರಣ ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿರುವ ಒಂದು ಪೋಸ್ಟ್..
ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ ' ಕುರುಕ್ಷೇತ್ರ' ಹಾಗೂ ' ರಾಂಧವ' ಚಿತ್ರಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ..ಈ ರೀತಿ ಬರೆದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.. . ಕುರುಕ್ಷೇತ್ರ ಸಿನಿಮಾದಲ್ಲಿ ವಾಣಿ ಬಳಿ ಒಂದು ಹಾಡನ್ನು ಹಾಡಿಸಲಾಗಿತ್ತು. ಆದರೆ ಧ್ವನಿಸುರುಳಿ ಬಿಡುಗಡೆಯಾದ ನಂತರ ವಾಣಿ ಅವರ ಬಳಿ ಹಾಡಿಸಿದ ಹಾಡನ್ನು ಅನುರಾಧ ಭಾಟ್ ಬಳಿ ಹಾಡಿಸಲಾಗಿದೆ.ಪತಿಯೇ ಸಂಗೀತ ನಿರ್ದೇಶಕರಾಗಿರುವಾಗ ಯಾಕೆ ಕೊನೆ ಕ್ಷಣದಲ್ಲಿ ಪತ್ನಿ ಕಂಠದಲ್ಲಿ ಹಾಡಿದ್ದ ಹಾಡನ್ನು ಬದಲಿಸಿದರು ಎನ್ನುವುದೇ ದೊಡ್ಡ ಪ್ರಶ್ನೆ. ಅಷ್ಟೆ ಅಲ್ಲದೆ ರಾಂಧವ' ಚಿತ್ರದಲ್ಲು ಹೀಗೆ ಆಗಿದೆ ಎನ್ನಲಾಗಿದೆ, ಹೀಗಾಗಿ ವಾಣಿ ಹರಿಕೃಷ್ಣವರು ಬೇಸರವಾಗಿ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ವಾಣಿಯವರ ಈ ಪೋಸ್ಟ್‌ನಲ್ಲಿ ಬೇರೆ ಏನೋ ಇದೆ ಇಬ್ಬರ ದಾಂಪತ್ಯ ಸರಿ ಇಲ್ಲ ಅನ್ನೋ ರೀತಿ ಬಿಂಬಿತವಾಗುತ್ತಿದೆ. ಒಟ್ಟಿನಲ್ಲಿ ವಾಣಿ ಹರಿಕೃಷ್ಣ ಅವರು ಬೇಸರಗೊಂಡಿರುವುದು ಅವರ ಪೋಸ್ಟ್ ನಿಂದಲೇ ಗೊತ್ತಾಗುತ್ತಿದೆ.
Comments