ರಾಕಿಂಗ್ ಜೋಡಿಯ ಎರಡನೇ ಮಗುವಿನ ಹೆಸರೇನು ಗೊತ್ತಾ..?
ಚಂದನವನದ ಕ್ಯೂಟ್ ಕಪಲ್’ಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್’ವುಡ್ ನ ಸಿಂಡ್ರೆಲಾ ಕೂಡ ಒಬ್ಬರು… ಸದ್ಯ ರಾಕಿಂಗ್ ಜೋಡಿ ಮುದ್ದು ಮಗಳ ಜೊತೆ ಆಟವಾಡುತ್ತಾ ಮತ್ತೊಬ್ಬ ಅಥಿತಿಯಾಗಿ ಕಾಯುತ್ತಿದ್ದಾರೆ. ರಾಕಿಂಗ್ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿರುವ ಈ ಜೋಡಿಗೆ ಗಂಡು ಮಗು ಆಗಬೇಕೆಂಬುದು ಅಭಿಮಾನಿಗಳ ಆಸೆಯಾಗಿದೆ.
ರಾಕಿಂಗ್ ಜೋಡಿಯ ಮಗಳಿಗೆ ಅಭಿಮಾನಿಗಳು ಹೆಸರನ್ನು ಸೂಚಿಸಿದ್ದಾರೆ.. ಲಕ್ಷ್ಮಿ ದೇವರ ಹೆಸರಾದ ಐರಾ ಎಂಬ ಹೆಸರನ್ನು ಮಗಳಿಗೆ ಇಟ್ಟಿದ್ದರು.. ಇದೀಗ ಎರಡನೇ ಮಗುವಿಗೂ ಕೂಡ ಅಭಿಮಾನಿಗಳು ಹೆಸರನ್ನು ಸೂಚಿಸಿದ್ದಾರೆ.. ಎಸ್.. ಇದೀಗ ರಾಕಿಂಗ್ ಜೋಡಿಯ ಅಭಿಮಾನಿಗಳು ನಿಮಗೆ ಈ ಬಾರಿ ಗಂಡು ಮಗುನೇ ಆಗೋದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ ಅಷ್ಟೆ ಅಲ್ಲದೆ ಆ ಮಗುವಿಗೆ ಹೆಸರನ್ನು ಕೂಡ ಸೂಚಿಸುತ್ತಿದ್ದಾರೆ.. ಹೆಣ್ಣು ಮಗುವಾದರೂ ಪರವಾಗಿಲ್ಲ, ಗಂಡು ಮಗುವಾದರೆ ಪರವಾಗಿಲ್ಲ.. ಇನ್ನು ಹೆಣ್ಣು ಮಗುವಿಗೆ ” ಐರಾ ” ಅಂತ ಹೆಸರಿಟ್ಟಿದ್ದೀರ. ಹಾಗಾಗಿ ಗಂಡು ಮಗುವಾದರೆ ‘ಆರ್ಯ’ ಎಂಬ ಹೆಸರನ್ನು ಇಡಿ ಎಂದು ಅಭಿಮಾನಿಗಳು ಹೇಳಿದ್ದಾರೆ.. ಮಗಳ ಜೊತೆ ಟೈಮ್ ಪಾಸ್ ಮಾಡುತ್ತಿರುವ ಈ ಜೋಡಿ ಮತ್ತೊಬ್ಬ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
Comments