ಪತ್ನಿ ಮುಖವನ್ನು ಬೆನ್ನಿನ ಮೇಲೆ ಟ್ಯಾಟು ಹಾಕಿಸಿಕೊಂಡ ನಟ..!!

23 Jul 2019 4:20 PM | Entertainment
487 Report

ಪ್ರೀತಿ, ಮದುವೆ ಇದೆಲ್ಲಾ ಒಂದು ರೀತಿಯ ವಿನೂತನ ಸಂಬಂಧ… ಪ್ರೀತಿಸಿದವರು ಸದಾ ನಮ್ಮೊಂದಿಗೆ ಿರಬೇಕು ಅಂತ ತುಂಬ ಆಸೆ ಪಡುತ್ತೀವಿ.. ಹಾಗಾಗಿ ಇಷ್ಟ ಪಟ್ಟವರ ಹೆಸರನ್ನು ಅಚ್ಚೆ ಹಾಕಿಸಿಕೊಳ್ಳುತ್ತೇವೆ.. ಅದೇ ರೀತಿ ನಟನೊಬ್ಬ ತನ್ನ ಹೆಂಡತಿಯ ಪೊಟೋವನ್ನು ಬೆನ್ನಿನ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾನೆ.. ತನಾಜ್ ಇರಾನಿ ಹಾಗೂ ಬಕ್ತಿಯಾರ್ ಟಿವಿಯ ಪ್ರಸಿದ್ಧ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು.. ಇಬ್ಬರಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಇದೆ..

ಎಸ್.. ಇವರಿಬ್ಬರು ಮದುವೆಯಾಗಿ 14 ವರ್ಷ ಕಳೆದು ಹೋಗಿವೆ.. ಆದರೂ ಕೂಡ  ಇಬ್ಬರ ಮಧ್ಯೆ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇಬ್ಬರ ಮಧ್ಯೆ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಇದಕ್ಕೆ ಬಕ್ತಿಯಾರ್, ತಮ್ಮ ಬೆನ್ನಿನ ಮೇಲೆ ಪತ್ನಿ ಮುಖವನ್ನು ಹಚ್ಚೆ ಹಾಕಿಸಿಕೊಂಡಿರುವುದೇ ಸಾಕ್ಷಿ.. ಬಕ್ತಿಯಾರ್ ಹಾಕಿಸಿಕಪಂಡಿರುವ ಟ್ಯಾಟೂ ತುಂಬಾ ಸುಂದರವಾಗಿದೆ. ಸೋಷಿಯಲ್ ಮಿಡೀಯಾದಲ್ಲಿ ಟ್ಯಾಟು ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಬಕ್ತಿಯಾರ್ ಪ್ರೀತಿಗೆ ಮೆಚ್ಚುಗೆಗಳ ಸುರಿಮಳೆಯನ್ನೆ ಸುರಿಸಿದ್ದಾರೆ. .  ಕಾಲೇಜು ದಿನಗಳಲ್ಲಿಯೇ ಮದುವೆಯಾಗುವ ಹುಡುಗಿ ಫೋಟೋವನ್ನು ಹಚ್ಚೆ ಹಾಕಿಸಿಕೊಳ್ಳಬೇಕೆಂದು ಬಕ್ತಿಯಾರ್ ಅಂದುಕೊಂಡಿದ್ದರಂತೆ . ಆದರೆ ಸಮಯ ಸಿಗದ ಕಾರಣ  ಈಗ ಹೆಂಡತಿಯ ಪೊಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

 

Edited By

Manjula M

Reported By

Manjula M

Comments