ಅಗ್ನಿಸಾಕ್ಷಿಯ ಸಿದ್ದಾರ್ಥ್ ನ ಫಸ್ಟ್ ಕ್ರಶ್ ಯಾರಂತೆ ಗೊತ್ತಾ..?
ಸದ್ಯ ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ಹುಡುಗರಲ್ಲಿ ಅಗ್ನಿ ಸಾಕ್ಷಿಯ ಸಿದ್ದಾರ್ಥ್ ಕೂಡ ಒಬ್ಬರು… ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಅಂದ್ರೆ ಹೆಣ್ಣು ಮಕ್ಕಳಿಗೆ ಫೇವರೆಟ್… ಡಿಂಪಲ್ ಹುಡುಗನ ಸ್ಮೈಲ್ ಗೆ ನಮ್ಮ ಹೆಣ್ಮಕ್ಕಳು ಫಿದಾ… ಕಲರ್ಸ್ ಕನ್ನಡದ ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ'ಯ ಮೋಸ್ಟ್ ಹ್ಯಾಂಡ್ಸಮ್ ಆ್ಯಂಡ್ ಸ್ಮಾರ್ಟ್ ಮ್ಯಾನ್ ಸಿದ್ದಾರ್ಥ್ ನ ಫಸ್ಟ್ ಕ್ರಶ್ ಯಾರಂತೆ ಗೊತ್ತಾ..?
ಅದಷ್ಟೆ ಅಲ್ಲದೆ ವಿಜಯ್ ಸೂರ್ಯಗೆ ಟೆಲಿವಿಷನ್ ಕಡೆ ಒಲವು ಬರಲು ಕಾರಣವೇನು ಎಂಬುದನ್ನು ಕೂಡ ಅವರೇ ತಿಳಿಸಿದ್ದಾರೆ. ಚಿಕ್ಕವರಿದ್ದಾಗ ನಮ್ಮ ತಂದೆ ಪಕ್ಕದ ಲೈಬ್ರರಿಯಿಂದ ವಿಸಿಆರ್, ವಿಡಿಯೋ ಕ್ಯಾಸೆಟ್ ಗಳನ್ನು ತಂದು ವಾರಕ್ಕೊಮ್ಮೆ ಸಿನಿಮಾವನ್ನು ತೋರಿಸುತ್ತಿದ್ದರು. ನಮ್ಮ ಮನೆಯಲ್ಲಿ ಚಿಕ್ಕ ಬ್ಲಾಕ್ ಅಂಡ್ ವೈಟ್ ಟಿವಿ ಇತ್ತು. 90 ರ ದಶಕದಲ್ಲಿ ನಾವು ಕಲರ್ ಟಿವಿ ತಂದೆವು’ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ‘ಶಕ್ತಿಮಾನ್’ ಧಾರಾವಾಹಿ ಈಗಲೂ ನೆನಪುಳಿಯುವ ಧಾರಾವಾಹಿ. ವೀಕೆಂಡ್ ಗಳಲ್ಲಿ ಬರುತ್ತಿದ್ದ ಡೊನಾಲ್ಡ್ ಡಕ್ ಸೀರಿಸ್ ಗಾಗಿ ಯಾವಾಗಲೂ ಕಾಯುತ್ತಾ ಕುಳಿರುತ್ತಿದ್ದೆವು ಎಂದಿದ್ದಾರೆ. ನಂತರ ಕೇಬಲ್ ಟಿವಿ ಬಂತು. ಆಗ ನಮ್ಮ ಅಮ್ಮ ಕಾದಂಬರಿ ಧಾರವಾಹಿ ನೋಡುತ್ತಿದ್ದರು.ಶ್ವೇತಾ ಚೆಂಗಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾನಾವಾಗ ಚಿಕ್ಕವನಿದ್ದೆ. ಅವರೇ ನನ್ನ ಫಸ್ಟ್ ಕ್ರಶ್ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ.. ವಿಜಯ್ ಸೂರ್ಯ ಇತ್ತಿಚಿಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಪ್ರೇಮಲೋಕ ಎನ್ನುವ ಹೊಸ ಧಾರವಾಹಿಯಲ್ಲಿ ಸಿದ್ದಾರ್ಥ್ ಕಾಣಿಸಿಕೊಂಡಿದ್ದಾರೆ.
Comments