ಕಮಲ್ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಪ್ರಗ್ನೆಂಟ್..?
ಇತ್ತಿಚಿಗೆ ಸೆಲಬ್ರೆಟಿಗಳು ಜೊತೆಗೆ ಅವರ ಮಕ್ಕಳು ಕೂಡ ಸದಾ ಸುದ್ದಿಯಾಗುತ್ತಿರುತ್ತಾರೆ.. ಇದೀಗ ಕಮಲ ಹಾಸನ್ ಮಗಳು ಅಕ್ಷರಾ ಹಾಸನ್ ಸುದ್ದಿಯಾಗಿದೆ.. ಹೌದು ಅಕ್ಷರಾ ಹಾಸನ್ ಪ್ರಗ್ನೆಂಟ್ ಅಂತೇ.. ಅರೇ ಹೌದಾ.. ಇನ್ನು ಆಕೆಗೆ ಮದುವೆನೇ ಆಗಿಲ್ಲ.. ಆಗಲೇ ಪ್ರಗ್ನೆಂಟ್ ಅಂತಾ ಅಚ್ಚರಿ ಪಡಬೇಡಿ.. ಇದು ರಿಯಲ್ ಜೀವನದಲ್ಲಿ ಅಲ್ಲ.. ಬದಲಿಗೆ ರೀಲ್ ನಲ್ಲಿ..
ಚಿಯಾನ್ ವಿಕ್ರಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾ ಕದರಮ್ ಕೊಂಡನ್ ಎನ್ನುವ ಸಿನಿಮಾದಲ್ಲಿ ಕಮಲ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಗರ್ಭಿಣಿ ಪಾತ್ರ ಮಾಡುತ್ತಿದ್ದಾರೆ. ಕದರಮ್ ಕೊಂಡನ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ.. ಈ ಸಿನಿಮಾದಲ್ಲಿ ಕಿಲಾಡಿಯೊಬ್ಬ ಕಾರನ್ನು ಹೈಜಾಕ್ ಮಾಡಿರುತ್ತಾನೆ. ಅದು ಮಹಿಳೆ ಕಾರು ಎಂದು ತಿಳಿಯುತ್ತದೆ. ಹೇಗೆ ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂಬುದನ್ನು ತೋರಿಸುವುದೇ ಕದರಮ್ ಕೊಂಡನ್ ಸಿನಿಮಾದ ಕಥಾ ವಸ್ತುವಾಗಿದೆ. ರಾಜೇಶ್ ಸೆಲ್ವಾ ಕದರಮ್ ಕೊಂಡನ್ ಗೆ ಕಥೆ ಬರೆದಿದ್ದಾರೆ. ಅಕ್ಷರಾ ಹಾಸನ್ ಪ್ರಗ್ನೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Comments