ಈ ಹೀರೋಗೆ ಕಿಡ್ನಿ ವೈಫಲ್ಯ..! ಕಿಡ್ನಿದಾನಕ್ಕೆ ಮುಂದಾದ ಅಮ್ಮ..!!!
ಭಾರತೀಯಾ ಸಿನಿಮಾ ರಂಗದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ ಸಿನಿಮಾ ಎಂದರೆ ಅದು ಬಾಹುಬಲಿ ಸಿನಿಮಾ.. ಟಾಲಿವುಡ್ ನ ಈ ಸಿನಿಮಾ ಸಾಕಷ್ಟು ಕಲಾವಿದರಿಗೆ ಹೆಸರು ತಂದು ಕೊಟ್ಟಿತ್ತು.. ಅಂತಹ ಕಲಾವಿದರಲ್ಲಿ ರಾಣ ದಗ್ಗುಬಾಟಿ ಕೂಡ ಒಬ್ಬರು.. ರಾಣ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ… ರಾಣ ಗೆ ಕಿಡ್ನಿ ವೈಫಲ್ಯವಾಗಿದೆಯಂತೆ.. ಹಾಗಾಗಿ ರಾಣ ವಿದೇಶದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ರಾಣಗೆ ಮೂತ್ರಪಿಂಡದ ಕಸಿಯ ಅಗತ್ಯವಿದ್ದು, ರಾಣ ತಾಯಿಯೇ ಕಿಡ್ನಿದಾನಕ್ಕೆ ಮುಂದಾಗಿದ್ದಾರೆ. ಟಾಲಿವುಡ್ ಅಷ್ಟೇ ಅಲ್ಲದೆ ಬಾಲಿವುಡ್ ನಲ್ಲಿಯೂ ಸಹ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ಇದೀಗಾ ರಾಣಾ ಕಳೆದ ಒಂದು ವರ್ಷದಿಂದ ಮುಂಬೈ ಹಾಗೂ ಹೈದರಾಬಾದಿನಲ್ಲಿ ರಾಣಾ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಕಾರಣದಿಂದಾಗಿ ಅಮೆರಿಕದಲ್ಲಿ ಈಗ ರಾಣಾ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಣಾ ಕಿಡ್ನಿ ಹಾಳಾಗಿದ್ದು, ಬದಲಿ ಕಿಡ್ನಿ ಜೋಡಣೆ ಮಾಡಬೇಕೆಂದು ಅಮೆರಿಕದ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ರಾಣಾಗೆ ಕಿಡ್ನಿಗೆ ಕೊಡಲು ಅವರ ತಾಯಿ ಲಕ್ಷ್ಮಿ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಆರೋಗ್ಯದಲ್ಲಿ ಚೇತರಿಸಿಕೊಂಡ ನಂತರವಷ್ಟೆ ದಗ್ಗುಬಾಟಿ ಮತ್ತೆ ನಟನೆಯತ್ತ ಮುಖಮಾಡಲಿದ್ದಾರೆ ಎನ್ನಲಾಗುತ್ತಿದೆ.
Comments