ಅಭಿಮಾನಿಗಳ ಕೋಪಕ್ಕೆ ತುತ್ತಾದ ರಶ್ಮಿಕಾ ಮಂದಣ್ಣ..!! ಕಾರಣ ಏನ್ ಗೊತ್ತಾ..?

20 Jul 2019 1:55 PM | Entertainment
505 Report

ಸ್ಯಾಂಡಲ್ ವುಡ್ ನಲ್ಲಿ ಭರವಸೆಯನ್ನು ಹುಟ್ಟಿಸಿದ ನಾಯಕಿಯರಲ್ಲಿ ರಶ್ಮಿಕಾಮಂದಣ್ಣ ಕೂಡ ಒಬ್ಬರು.. ಚಂದನವನದಲ್ಲಿ ಅಷ್ಟೆ ಅಲ್ಲದೆ ಪರಭಾಷೆಗಳಲ್ಲಿಯೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.. ಪರಭಾಷೆಯಲ್ಲಿಯೂ ಕೂಡ ಬೇಡಿಕೆಯ ನಟಿಯಾಗಿದ್ದಾರೆ.  ಕಿರಿಕ್ ಪಾರ್ಟಿ ಸಿನಿಮಾ ದಿಂದ ಸಾಕಷ್ಟು ಹೆಸರು ಮಾಡಿದ ಸಾನ್ವಿ ಸದ್ಯ ಸೌತ್  ಸಿನಿಮಾರಂಗದ ಪಡ್ಡೆ ಹುಡುಗರ ಹಾಟ್ ಫೆವರೆಟ್ ನಟಿಯಾಗಿದ್ದಾರೆ. ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ.

ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುವ ಕಿರಿಕ್ ಬೆಡಗಿ ಸಾನ್ವಿ ಈಗ ಮತ್ತೆ ಸುದ್ದಿಯಾಗಿದ್ದಾರೆ,ಡಿಯರ್ ಕಾಮ್ರೇಡ್ ಸಿನಿಮಾ ಸದ್ಯ ಬಿಡುಗಡೆಯಾಗುತ್ತಿದೆ.ಇದರ ನಡುವೆ ರಶ್ಮಿಕಾ ಮತ್ತೊಂದು ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.ಡಿಯರ್ ಕಾಮ್ರೆಡ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ಧಾರೆ. ಚಿತ್ರದ ಪ್ರಮೋಷನ್‍ಗಾಗಿ ತಮಿಳುನಾಡಿನಲ್ಲಿ ಸಂದರ್ಶನ ನೀಡುತ್ತಿದ್ದ ವೇಳೆ,ಸಂದರ್ಶಕ ನಿಮಗೆ ಕನ್ನಡ ಮಾತನಾಡಲು ಸುಲಭ ಅಲ್ಲವ ಅಂತ ಕೇಳಿದಾಗ ರಶ್ಮಿಕಾ ಮಂದಣ್ಣ ಇಲ್ಲ ಕನ್ನಡ ತುಂಬಾ ಕಷ್ಟ ಸರಿಯಾಗಿ ಮಾತನಾಡಲು ಬರೋಲ್ಲ ಅಂತ ನನಗೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ ಅಂತ ಹೇಳಿದ್ದಾರೆ.ಒಂದು ಸಿನಿಮಾ ಮಾಡಿದ್ದಾಗಲೇ ತೆಲಗು ಮಾತನಾಡಲು ಸ್ವಲ್ಪ ಕಲಿತ ರಶ್ಮಿಕಾ ತಾವು ಹುಟ್ಟಿ ಬೇಳೆದ ಭಾಷೆಯನ್ನ ಸರಿಯಾಗಿ ಮಾತನಾಡಲು ಇನ್ನೂ ಬರುವುದಿಲ್ಲ ಎಂದು ಸಿಟ್ಟಿಗೆದ್ದಿದ್ದಾರೆ.ಇದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಲ್ಲಿ ರಶ್ಮಿಕಾ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಆಗಿಂಗಿದಾಗೆ ಅಭಿಮಾನಿಗಳ ಕೋಪಕ್ಕೆ ತುತ್ತಾಗುತ್ತಿದ್ದಾರೆ..

Edited By

Manjula M

Reported By

Manjula M

Comments