ಮದುವೆಯಾಗದೆ ಮಗುವಿಗೆ ತಂದೆಯಾದ ಸ್ಟಾರ್ ನಟ..!!
ಸೆಲಬ್ರೆಟಿಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಲೆ ಇರುತ್ತಾರೆ. ಅದರಲ್ಲೂ ಬಾಲಿವುಡ್ ಮಂದಿ ಮಾತ್ರ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇದೀಗ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮದುವೆಯಾಗದೆ ಗಂಡು ಮಗುವಿಗೆ ತಂದೆ ಸುದ್ದಿಯಾಗುದ್ದಾರೆ. ಎಸ್..ಅರ್ಜುನ್ ರಾಂಪಾಲ್ ಅವರು ತಮ್ಮ ಗೆಳತಿಯಾದ ಗೈಬ್ರಿಲಾ ದೇಮಿತ್ರಿಯಾದ್ ಜೊತೆ ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್ ನಲ್ಲಿ ಇದ್ದರು.
ಇಂದು ಗೈಬ್ರಿಲಾ ಅವರು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅರ್ಜುನ್ ರಾಂಪಾಲ್‍ಗೆ ಈ ಮೊದಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅರ್ಜುನ್ ಮಕ್ಕಳಾದ ಮಹಿಕಾ ಹಾಗೂ ಮೈರಾ, ಗೈಬ್ರಿಲಾರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಸ್ವಲ್ಪ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಅರ್ಜುನ್, ನನ್ನ ಮಕ್ಕಳು ಸಂತೋಷದಿಂದ ಗೆಬ್ರಿಲಾಳನ್ನು ಒಪ್ಪಿಕೊಂಡಿದ್ದಾರೆ. ಗೆಬ್ರಿಲಾ ನನ್ನ ಕುಟುಂಬದ ಒಂದು ಭಾಗವಾಗಿರಬೇಕು ಎಂದು ನಾನು ಭಾವಿಸಿದೆ. ನನ್ನ ಮಕ್ಕಳು ನನಗೆ ಒಂದು ಪ್ರಶ್ನೆಯನ್ನು ಕೇಳದೆ ಆಕೆಯನ್ನು ಒಪ್ಪಿಕೊಂಡಿದ್ದಾರೆ. ನಾನು ತುಂಬಾನೇ ಅದೃಷ್ಟ ಮಾಡಿದೆ ಎಂದು ಹೇಳಿದ್ದರು. ಸದ್ಯ ಅರ್ಜುನ್ ಮದುವೆಯಾಗದೆ ತಂದೆಯಾಗಿರುವುದು ಸಖತ್ ಸುದ್ದಿಆಗಿದೆ.
Comments